ಜಲ ಜಲದ ಧಾರೆ
ಕವನ
ಜಲ ಜಲದ ಧಾರೆ
ಹಾಲ್ ನೊರೆಯ ನೀರೆ
ದುಮು ದುಮುಕಿ ಹರಿವ ಸೇಲೆ
ಮಂಜಲ್ಲಿ ಕರಗಿ
ಚಳಿಯಲ್ಲಿ ನಡುಗಿ
ಹೊಂಗಿರಣ ತಂಪ ಸಾಲೆ
ಲತೆಯಂತೆ ಬಳುಕಿ
ಮೈಯೊಳಗೆ ತುಳುಕಿ
ಚೆಲುವೆಲ್ಲ ಹರಿಸಿ ಸಾಗಿ
ಸುತ್ತೆಲ್ಲ ಸಿರಿಗೆ
ಬೆಳಕಾದ ಬಗೆಗೆ
ಒಲವೆಲ್ಲ ಸುರಿಸಿ ಬೀಗಿ
ತಾವರೆಯ ಎಲೆಗೆ
ಹನಿ ಹನಿಯ ನೀರು
ಮುತ್ತನ್ನು ಒತ್ತಿ ಹಾಡಿ
ಬಂಗಾರ ಕಿರಣ
ಹನಿಯೊಳಗೆ ಇಳಿದು
ಸುತ್ತೆಲ್ಲ ಹೊಳಪ ನೀಡಿ
ಮುಂಜಾನೆ ಸವಿಗೆ
ಅಂಬಿಗನ ದನಿಯು
ನೀರೊಳಗೆ ಓಡಿಯಾಡಿ
ಜಲಚರದ ರಾಶಿ
ಸುತ್ತೆಲ್ಲ ನಲಿದು
ಸಂತಸದಿ ಆಡಿಪಾಡಿ
ನೀರಲೆಯ ಸೊಬಗು
ನಾಚುತಲೆ ಸಾಗಿ
ಕಡಲನ್ನು ಅಪ್ಪಿ ಹಿಡಿದು
ಒಂದಾದ ಮೊಗದಿ
ನಗುವನ್ನು ಚೆಲ್ಲಿ
ಕೈ ಹಿಡಿದು ಸೇರಿ ನಡೆದು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
