ಜವರಾಯನಿಗಿಲ್ಲ ಕರುಣೆ ಒಂದಿನಿತೂ
ನಡುಬೀದಿಯಲ್ಲಿ ನಿಂತ ಅವಳು ಗಿರಾಕಿಗಾಗಿ ಅತ್ತಿತ್ತ ನೋಡುತ್ತಿದ್ದರೂ ಮನಸಿನ ಕಣ್ಣಿನ ಮುಂದೆ ಮಾತ್ರ ಹಸಿವು ಎಂದು ಅಳುತ್ತಿದ್ದ ತನ್ನ ಕಂದನ ಚಿತ್ರವೇ ಕುಣಿಯುತ್ತಿತು. ಯಾರದರೂ ಸಿಕ್ಕರೆ ಸಾಕು ಕಾಸು ತೆಗೆದುಕೊಂಡು ಮೊದಲು ಮಗುವಿಗೆ ಇಡ್ಲಿ ಕೊಡಿಸಿ ನಂತರ ಬರುವುದಾಗಿ ಹೇಳಬೇಕು
ನೆನ್ನೆವರೆಗೆ ಬಂದ ಹಣವನ್ನೆಲ್ಲಾ ಸಾರಾಯಿ ಅಂಗಡಿಗೆ ಸುರಿದಿದ್ದ ಅವಳನ್ನು ಈ ದಂಧೆ ಇಳಿಸಿದವ---ಬೇರಾರು ಅಲ್ಲ ಅವಳ ಗಂಡನೇ .ಆ ಊರಿನಿಂದ ಈ ಕಾಣದ ಊರಿಗೆ ಕರೆತಂದು ಒಂದು ಲಾಡ್ಜ್ನಲ್ಲಿ ಇಳಿಸಿ ಒಂದಷ್ಟು ಗಿರಾಕಿಗಳನ್ನು ಕರೆತಂದ . ನಂತರ ಅವರಿಂದ ಹಣ ಪಡೆದುಕೊಂಡವ ಪತ್ತೆಯೇ ಇಲ್ಲ ಬೆಳಗಿನಿಂದ.
ಮಗು ಹಸಿವೂ ಎಂದು ಭೋರ್ಗರೆದು ಅಳುತ್ತಿತು. ಬೆಳಗ್ಗೆ ಎದ್ದಾಗ ಬಿಸ್ಕೆಟ್ ಕೊಟ್ಟದ್ದಷ್ಟೆ .ಅವಳ ಹೊಟ್ಟೆಗೂ ಏನೂ ಇಲ್ಲ ಮಗುವಿಗೂ ಏನೂ ಇಲ್ಲ. ಏನಾದರಾಗಲಿ ಎಂದು ಮಗುವನ್ನು ಮಲಗಿಸಿ ಬಳಿಯಲ್ಲೇ ಇದ್ದ ಬಸ್ ಸ್ಟಾಪ್ಗ್ಗೆ ಬಂದು ನಿಂತಿದ್ದಳು.
ಅವಳನ್ನು ಗಂಡಸರು ನೋಡುತಿದ್ದರೇನೊ ನಿಜ ಆದರೆ ಬಳಿ ಬರುವ ಧೈರ್ಯ ಇರಲಿಲ್ಲವೆನ್ನಿಸುತವಳಿಗೆ
ಹಾಗಾಗಿ ಕಣ್ಣಲ್ಲೆ ಸನ್ನೆ ಮಾಡಿದಳು .
ಅವಳ ವಯಸು 30 ರ ಸಮೀಪ ಇರಬಹುದೇನೊ ಆದರೆ ಸಮಯ ಅದನ್ನು ಇನ್ನೂ ಹೆಚ್ಚಿಸಿತ್ತು. ಗುಳಿ ಬಿದ್ದ ಕಣ್ಣುಗಳಿಗೆ ಹಚ್ಚಿದ ಕಾಡಿಗೆ ಇಂದ ಇನ್ನೂ ಭಯಂಕರವಾಗಿ ಕಾಣುತಿದ್ದಳು.
ಹ್ಯಾಗೊ ಒಬ್ಬ ಬಂದ . ಚೌಕಾಸಿ ಮಾಡಿ 500 ರೂ ಗಳಿಂದ 200 ಕ್ಕೆ ಇಳಿಯಿತು ಅವಳ ರೇಟ್.
ಮಗುವಿಗೆ ಇಡ್ಲಿ ಕೊಡಿಸಿ ಇಲ್ಲೇ ಬರುವುದಾಗಿ ಹೇಳಿ ಬಳಿಯಲ್ಲಿನ ಅಂಗಡಿಯಿಂದ ಇಡ್ಲಿ , ಚಾಕ್ಲೆಟ್ ತೆಗೆದುಕೊಂಡು ಸಂಭ್ರಮದಿಂದ ಲಾಡ್ಜಿನೆಡ್ಗೆ ಧಾವಿಸುತ್ತಿದ್ದಂತೆ......................
ಅದ್ಲ್ಲಿದ್ದನೋ ಜವರಾಯ ಲಾರಿಯೊಂದರ ರೂಪದಲ್ಲಿ ಬಂದವನೇ ಅವಳ ಪ್ರಾಣ ಹೀರಿ ನಡೆದೇ ಬಿಟ್ಟ.
ಲಾರಿ ಹೋದ ನಂತರ ಅಲ್ಲಿದ್ದಿದ್ದು ಅವಳ ಜಜ್ಜಿ ಹೋದ ಶರೀರ ಹಾಗೂ ಚೆಲ್ಲಾಪಿಲ್ಲಿಯಾದ ಇಡ್ಲಿ , ಚಾಕ್ಲೆಟ್......................................................................
ಇತ್ತ ಮಗು ಅಮ್ಮ ಬರುತ್ತಾಳೆ ಎಂದು ಅಳುತ್ತಾ ಕಾಯುತ್ತಲೇ ಇತ್ತು................................................