ಜಾಣ ನಡಿಗೆ

ಜಾಣ ನಡಿಗೆ

ಕವನ

ಕತ್ತಲಲ್ಲಿ ಎಲ್ಲಿಗೆ ಪಯಣ ಸಾಗುವುದು

ಗೊತ್ತಿಲ್ಲದೆ ನಡೆದರೆ ಕಿರಣವೂ ಬೀಳದು /

ಯಾವ ನಗು ಬೀರಿ ನಡೆಯಲಿ

ಕಾಣದ ಊರಿಗೆ ಭಾರ ಹೆಜ್ಜೆಯೊಂದಿಗೆ //

 

ಹುಡುಕು ಹುಡುಕು ಪ್ರತಿದಿನವೂ ಅದೇ ರಾಗ

ಬೆನ್ನುಡಿಯ ಅರ್ಥ ಸರಳವೇ ಅಲ್ಲವಾಗಿದೆ /

ಸಮಸ್ಯೆಗೆ ಒಂದೊಂದು ಪರಿಹಾರವುಂಟು

ತಾಳ್ಮೆ ಅದರ ಮೇಲೆ ಪರೀಕ್ಷೆಗೆ ಒಡ್ಡುತ್ತದೆ //

 

ಟೀಕೆಗಳಿಗೇಕೆ ಜಗ್ಗಬೇಕು

ಆಗಾಗ್ಗೆ ಭ್ರಷ್ಟರು ಎದುರಾಗುತ್ತಾರೆ /

ಮೋಸ ವಂಚನೆ ಮೆರೆದಿರುವಾಗ

ಸತ್ಯವೆಂಬುದು ಕಹಿಯಾಗದಿರದೆ / ?

 

ಸರಳ ಜೀವನ ಸಲೀಸು ಇರಬಹುದು

ಆದರೆ ಎಚ್ಚರ ತಪ್ಪಬಾರದು /

ತಪ್ಪು ಒಪ್ಪುಗಳ ಮನ್ನಿಸಿ ನಡೆದು

ಬದುಕು ಸಾಗಿಸುವುದೇ ಜಾಣತನ //

-ಟಿ.ನಿರಂಜನಮೂರ್ತಿ, ಅರಸೀಕೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್