ಜಾತ್ರೆಯ ಸೊಬಗು
ಕವನ
ಜಾತುರೆಗೆ ಹೋಗೋಣ ಬಾ ಪುಟ್ಟ
ಕಳ್ಳೆಪುರಿ ತಿನ್ನೋಣ ಬಾ ಪುಟ್ಟಿ...
ಬೆಂಡು ಬತ್ತಾಸಿನ ರಾಶಿ ರಾಶಿಯಲಿ
ಗಿಲಿಗಿಲಿ ಗಿಲಕಿ ಬಣ್ಣ ಬಣ್ಣದಲಿ...
ರಂಗು ರಂಗಿನ ಬಳೆಯು ಗಾಜಿನಲಿ
ಮನವು ಸೆಳೆಯುತಿದೆ ಬಯಕೆಯಲಿ
ಪೀ,ಪೀ, ಬಲೂನು ಆಟಿಕೆ ಅಗ್ಗದಲಿ
ಕೊಳ್ಳೋಣ ಎಲ್ಲವನ್ನು ಪ್ರೀತಿಯಲಿ.
ಪಾತ್ರೆ, ಪಗಡಿಯದು ಬಗೆಬಗೆಯಲ್ಲಿ
ಬಿಟ್ಟು ಬರಲು ಆಗದು ಜಾತ್ರೆಯಲಿ
ಜಿಲೇಬಿ ರಾಶಿಯು ಕೇಸರಿ ರಂಗಲ್ಲಿ
ಖಾರ,ಕಡಲೆಯ ರಾಶಿ ಎಲ್ಲೆಡೆಯಲ್ಲಿ
ತೊಟ್ಟಿಲಾಟವು ಸೊಬಗಿನ ನೋಟದಲಿ
ಆಟವನಾಡುತ ನಲಿಯೋಣ ನಾವೆಲ್ಲವಲ್ಲಿ
ಕೆಳಗಿಂದ ಮೇಲಕ್ಕೆ- ಮೇಲಿಂದ ಕೆಳಗೆ
ಆಟದಲ್ಲಡಗಿದ ನೀತಿಯನ್ನು ಅರಿಯೋಣಯಿಲ್ಲಿ
ಜಾತುರೆಗೆ ಹೋಗೋಣ ಬಾ ಪುಟ್ಟ
ಜಾತುರೆಗೆ ಹೋಗೋಣ ಬಾ ಪುಟ್ಟಿ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್