ಜಾನಪದ ಜಂಗಮನಾದ ಎಸ್ಕೆಕೆ

ಜಾನಪದ ಜಂಗಮನಾದ ಎಸ್ಕೆಕೆ

ಜಯಗೌರೀ ಜಗದೀಶ್ವರೀ.., ಜಗದೀಶನಾಡುವಾ ಜಗವೆ ನಾಟಕರಂಗಾ.., ನಟವರ ಗಂಗಾಧರ.., ನುಡಿಮನ ಶಿವಗುಣ.., ಬಾರೇ ನೀ ಚೆಲುವೆ...  ಇವೆಲ್ಲಾ ಸ್ವರ್ಣಗೌರಿ ಚಲನಚಿತ್ರದ ಗೀತೆಗಳು. ಇವುಗಳನ್ನು ಬರೆದದ್ದು ಅರವತ್ತರ ದಶಕದಲ್ಲಿ, ಈ ಎಲ್ಲಾ ಹಾಡುಗಳೂ ಸೇರಿದಂತೆ ಅನೇಕ ಹಾಡುಗಳನ್ನು ಬರೆದರು, ಕೆಲವು ಚಿತ್ರಗಳಿಗೆ ಸಂಭಾಷಣೆ ಬರೆದರು, ಕೆಲವು ಅನುವಾದಿತ ನಾಟಕ, ಪ್ರಹಸನಗಳನ್ನು ಬರೆದರು, ಜನಪದ ಗೀತೆಗಳನ್ನರಸಿ ಹಳ್ಳಿ ಹಳ್ಳಿಗಳ ಗದ್ದೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರನ್ನು ಅರಸಿ ಅಲೆದು ಜನಪದ ಗೀತೆಗಳನ್ನು ಕಲೆಹಾಕಿ ಪ್ರಕಟಿಸಿದರು, ಹೀಗಾಗಿ ಇವರಿಗೆ ‘ಜಾನಪದ ಜಂಗಮ’ ಎಂಬ ವಿಶೇಷಣ ಅಂಟಿಕೊಂಡಿದೆ.. 

ಮೇಲಿನ ಗೀತೆಗಳು ಅಪ್ಪಟ ಕನ್ನಡದ ಮುತ್ತು-ರತ್ನಗಳು, ಇವನ್ನು ರಚಿಸಿದವರು ಎಸ್ ಕೆ ಕರೀಂಖಾನ್ ಅವರು. ಇವರು ಓದಿ ಅದ್ಯಾಪಕರಾದವರಲ್ಲ, ಸರಕಾರಿ ಉದ್ಯೋಗಿಯಲ್ಲ. ಅಪ್ಪಟ ಸ್ವಾತಂತ್ರ್ಯೋತ್ಸಾಹಿ, ಹೋರಾಟಗಾರ, ಕಾಲಿಟ್ಟ ಕ್ಷೇತ್ರದಲ್ಲೆಲ್ಲಾ ಅಲ್ಲಿನ "ಮೇರು ಅಸ್ತಿತ್ವ" ವನ್ನು ಕಾಣಲು ಕಾತುರರಾಗಿರುತ್ತಿದ್ದರು..! ಅದನ್ನು ಸ್ಥಾಪಿಸಿ ತೋರಿಸಿದ ಹಠವಾದಿ. ಬಹಳ ಸರಳತೆಯನ್ನು ಬಯಸುತ್ತಿದ್ದ ಮೇದಾವಿ, ಯಾರಿಗೂ ನೋವುಂಟುಮಾಡದ ಸಜ್ಜನ, ನಮ್ಮ ದಸರಾ ನಾಡಹಬ್ಬಕ್ಕೆ ಇವರ ಕೃತಿಗಳಿರದೇ ಸಂಭ್ರಮ ಬಾರದು..! ಇವರ ಹಾಡು/ಗೀತೆಗಳು ಉಲ್ಲಾಸ ಉಂಟುಮಾಡುತ್ತಾ ಇಂದಿಗೂ ಜೀವಂತವಾಗಿರುವುದೇ ಸಾಕ್ಷಿ. 

-ಸತ್ಯ ಹರಿಹಳ್ಳಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ