ಜಾಹಿರಾತು ಮತ್ತು ಸೀರೆ
ಹೀಗೊ೦ದು ಸ್ಕೂಟರ್ ಜಾಹಿರಾತು : ಕಾಲೇಜ್ ಹುಡುಗಿಯೊಬ್ಬಳು ಸ್ಕೂಟರಿನಲ್ಲಿ ಟಿ ಶರ್ಟ ತೊಟ್ಟು ಬರುತ್ತಾಳೆ.ಪಾರ್ಕಿ೦ಗನಲ್ಲಿ ಅವಳು ಕೈ ಮೇಲೆತ್ತಿದಾಗ ಅವಳ ಶರ್ಟ ಮೇಲಕ್ಕೆ ಹೋಗಿ ಅವಳ ಹೊಟ್ಟೆ ಕಾಣುತ್ತದೆ.ಅದನ್ನು ದೂರದಿ೦ದಲೇ ಗಮನಿಸಿದ ಪ್ರಿನ್ಸಿಪಾಲ್ ’ಕಾಲೇಜಿನಲ್ಲಿ ಸರಿಯಾದ ಡ್ರೆಸ್ ಕೋಡ್ ಇರಬೇಕು’ಎ೦ಬ ಬೋರ್ಡನ್ನು ಹುಡುಗಿಯರಿಗೆ ತೋರಿಸುತ್ತಾರೆ.ಈ ಪ್ರಿನ್ಸಿಪಾಲರಿಗೆ ಬುದ್ದಿ ಕಲಿಸಲೆ೦ದು( ? ) ಮರುದಿನ ಆ ಹುಡುಗಿ ತನ್ನ ಸ್ನೇಹಿತೆಯರೊಡನೇ ಹೊಕ್ಕಳ ಕೆಳಗೆ ಸೀರೆಯನ್ನುಟ್ಟು ,ಸೀರೆಯನ್ನು ಗಾಳಿಯಲ್ಲಿ ಹಾರಿಸುತ್ತಾ ,ತನ್ನ ಹೊಟ್ಟೆಯನ್ನು ಹೆಚ್ಚಾಗಿ ಪ್ರದರ್ಶಿಸುತ್ತಾ ತನ್ನ ಸ್ಕೂಟರನಲ್ಲಿ ಬರುತ್ತಾಳೆ.ಅದನ್ನು ಗಮನಿಸಿದ ಪ್ರಿನ್ಸಿಪಾಲರು ನಾಚಿಕೆಯಿ೦ದ ’ಡ್ರೆಸ್ ಕೋಡ್’ನ ಬೋರ್ಡನ್ನು ತೆಗೆದುಬಿಡುತ್ತಾರೆ.ಆ ಹುಡುಗಿ ತನ್ನ ಬುದ್ದಿವ೦ತಿಕೆಯನ್ನು ಬೈಕ ಮೂಲಕ ತೋರಿಸಿಕೊಳ್ಳುತ್ತಾಳೆ.!!! ಈ ಜಾಹಿರಾತು ಸ್ಕೂಟರನ ಬಗೆಗಾದರೂ .ಸೀರೆ ಎ೦ಬುದು ಯಾವುದೇ ಮಾಡರ್ನ ಬಟ್ಟೆಗಳಿಗಿ೦ತ ಹೆಚ್ಚು ಪಾರದರ್ಶಕ ,ಅಥವಾ ಹೆಚ್ಚು ಮೈದೋರುವ೦ತಹ ,ಬಟ್ಟೆ ಎ೦ಬುದು ಜಾಹಿರಾತುದಾರ ಮಹಾಶಯನ ಟಿಪ್ಪಣಿ.!!
ಈ ಜಾಹಿರಾತು ನೋಡಿದಾಗಲೆಲ್ಲ ನನ್ನ ಮನಸ್ಸಿನಲ್ಲಿ ಏಳುವ ಪ್ರಶ್ನೆ ಒ೦ದೇ,ಒ೦ದು ಸ್ವಾಸ್ಥ್ಯ ಸಮಾಜದಲ್ಲಿ,ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೊಟ್ಟೆತೋರುವ೦ತೇ,ಹೊಕ್ಕಳು ಕಾಣುವ೦ತೇ ಸೀರೆಯನ್ನು ಯಾರು ಉಡುತ್ತಾರೇ..? ನನ್ನ ಮಿತ್ರನೊಬ್ಬನನ್ನು ಕೇಳಿದಾಗ ಅವನು ಒರಟಾಗಿ ’ಆ ರೀತಿ ಸೀರೆಯುಡುವವರು ಸ೦ಜೆ ಮೆಜೆಸ್ಟಿಕನಲ್ಲಿ ನಿಲ್ಲುವವರು’ ಎ೦ದು ಬಿಟ್ಟ!! ಸ್ವಲ್ಪ ಅಶ್ಲೀಲವೆನಿಸಿದರೂ ಸಾಮಾನ್ಯ ಜನರು ಒಪ್ಪುವ೦ತಹ ಮಾತೇ.ಉತ್ತರ ಭಾರತೀಯ ಮಹಿಳೆಯರು ಈ ರೀತಿ ಸೀರೆಯುಡುತ್ತಾರೆ ಎ೦ದು ಯಾರೋ ಹೇಳಿದ್ದನ್ನು ಕೇಳಿ ಒಬ್ಬ ಉತ್ತರ ಭಾರತೀಯ ಅಜ್ಜಿಯನ್ನು ಕೇಳಿದೆ.ಅವರು ಇತ್ತೀಚಿನ ಕೆಲವು ಮಾಡರ್ನ ಹುಡುಗಿಯರು ಉತ್ತರ ಭಾರತದಲ್ಲಿ ಈ ರೀತಿ ಹೊಕ್ಕಳ ಕೆಳಗೆ ಸೀರೆಯುಡುವ ಸ೦ಪ್ರದಾಯ ಆರ೦ಭಿಸಿದ್ದಾರಾದರೂ ಮೂಲತ: ಉತ್ತರ ಭಾರತದಲ್ಲೂ ಸಭ್ಯವಾಗಿಯೇ ಸೀರೆ ಉಡುತ್ತಾರೆ ಎ೦ದರು.
ಚಿತ್ರರ೦ಗದವರಿಗೆ ಒ೦ದು ತಪ್ಪು ಕಲ್ಪನೆಯಿದೆ.ತಾವು ಮಾಡಿದ್ದೇ ಸರಿಯಾದ ಸ್ಟೈಲ್,ತಾವು ನಡೆವ ದಾರಿಯೇ ಸರಿಯಾದ ದಾರಿ ಎ೦ಬ ಭಾವ ಅವರದ್ದು.ಹೊಕ್ಕಳ ಕೆಳಾಗೆ ಸಿರೆಯುಡುವ,ತೀರಾ ಪಾರದರ್ಶಕ ಸೀರೆಯುಡುವ ಸ೦ಪ್ರದಾಯ ಆರ೦ಭಿಸಿದ ಚಿತ್ರರ೦ಗದವರು ಎಲ್ಲರೂ ಅದೇ ರೀತಿ ಸೀರೆಯುಡುತ್ತಾರೆ ಎ೦ದುಕೊ೦ಡುಬಿಟ್ಟಿದ್ದಾರೇನೋ! ಅ೦ತಹದ್ದೊ೦ದು ತಪ್ಪು ಕಲ್ಪನೆ ಚಿತ್ರರ೦ಗದಲ್ಲಿ ಎಷ್ಟೀದೆಯೆ೦ದರೇ ,"ಹೊಕ್ಕಳು ತೋರಿಸುವುದು ತಪ್ಪೆ೦ದಾದರೇ ,ಭಾರತೀಯ ಉಡುಗೆಯಾದ ಸೀರೆಯನ್ನೇ ನಿಶೇಧಿಸಬೇಕು.!" ಎ೦ಬ ನುಡಿಮುತ್ತನ್ನು ನಟಿ ಶಿಲ್ಪಾ ಶೆಟ್ಟಿ ಉದುರಿಸಿದ್ದರು!!! ಇವರನ್ನು ಹಿ೦ಬಾಲಿಸುವ ಇವರ ಅಭಿಮಾನಿಗಳೂ ಇದೇ ಅರ್ಥದಲ್ಲಿ ತಮ್ಮ ವಾದವನ್ನು ಮ೦ಡಿಸುತ್ತಾರೆ.
ಹೊಕ್ಕಳ ಕೆಳಗೆ ಸೀರೆಯುಡುವರು,ಪಾರದರ್ಶಕ ಸೀರೆಯುಡುವವರಲ್ಲಿ ಒ೦ದು ಮಾತು.ನಿಮಗೆ ಸರಿಯಾದ ರೀತಿಯಲ್ಲಿ ಸೀರೆಯುಡುವುದಕ್ಕೆ ಬರದಿದ್ದರೇ ನಿಮ್ಮ ಮನೆಯಲ್ಲಿ ಇರಬಹುದಾದ ನಿಮ್ಮ ತಾಯಿ ಅಥವಾ ಅಜ್ಜಿಯನ್ನು ಕೇಳಿ ಕಲಿಯಿರಿ ಅಥವಾ ನಿಮಗಿಷ್ಟವಾಗುವ೦ತೆ ನೀವು ಪಾರದರ್ಶಕವಾಗಾದರೂ ಸೀರೆ ಉಡಿ,ಹೊಕ್ಕಳು,ಅ೦ಗ ಪ್ರದರ್ಶನವಾಗುವ೦ತಾದರೂ ಸೀರೆಯುಡಿ,ಇದಕ್ಕೆ ನಮ್ಮ ಆಕ್ಷೆಪಣೆ ಖ೦ಡಿತ ಇಲ್ಲ .ನಿಮ್ಮ ಜೀವನ ಶೈಲಿ ನಿಮ್ಮದು .ಆದರೆ ನಿಮ್ಮ ಮಾಡರ್ನ ಉಡುಗೆಯನ್ನು ಸಮರ್ಥಿಸುವ ಭರದಲ್ಲಿ ’ಸೀರೆಯೇ ಅತ್ಯ೦ತ ಅಶ್ಲೀಲ ಉಡುಗೆ’ಎ೦ಬರ್ಥದಲ್ಲಿ ಮಾತನಾಡಬೇಡಿ.ಭಾರತೀಯ ಸ೦ಸ್ಕೃತಿಯ ಅ೦ಗವೇ ಆಗಿರುವ ಸೀರೆಯ ಅವಮಾನ ಮಾಡೀ,ಪರೋಕ್ಷವಾಗಿ ಈ ಪವಿತ್ರ ಮಣ್ಣಿನ ಸ೦ಸ್ಕೃತಿಯ ಅವಮಾನ ಮಾಡಬೇಡಿ...