ಜಾಹೀರಾತೆಂಬ ಮಾಯಾಮೃಗ...

ಜಾಹೀರಾತೆಂಬ ಮಾಯಾಮೃಗ...

ಕವನ

ಬಣ್ಣ ಬಣ್ಣದ ಜಾಹೀರಾತುಗಳನೆಂದೂ ನಂಬದಿರಿ

ಇವು ದೂರದರ್ಶನದ ಮಾಯಾಮೃಗಗಳೇ ಸರಿ!

 

ನಿಮ್ಮ ಹುಚ್ಚರನ್ನಾಗಿಸುವ ಮಹೇಂದ್ರ ಜಾಲವಿದು

ಹತ್ತಾರು ಅತೀ ಬುದ್ಧಿವಂತರ ಚಾಲಾಕೀತನವಿದು

ಅತೀ ಚಾಣಾಕ್ಷತನದಲಿ ಇದ ರೂಪಿಸಿಬಿಡುವರು

ನಿಮ್ಮ ತಲೆ ಹೃದಯಗಳಿಗೆ ಲಗ್ಗೆ ಹಾಕಿ ಬಿಡುವರು!

 

ಒಂದು ಸಾಧಾರಣ ಗುಣ ಹತ್ತಾರೆಂದು ಬಣ್ಣಿಪರು

ಚೆಂದದ ಹುಡುಗ ಹುಡುಗಿಯರನೇ ಬಳಸುವರು

ನಿಮ್ಮನಾಕರ್ಷಿಸಲು ದೃಶ್ಯ-ಭಾವ-ಮಾತ ಸಂಗಮ

ಲಾಭವೊಂದೇ ಇವರ ಪರಮ ಗುರಿಯಾಗಿಹುದು!

 

ಇನ್ನು ಜಾಹೀರಾತ ನಟ-ನಟಿಯರರೇನು ಬಣ್ಣಿಸಲಿ?

ಅವರೆಲ್ಲಾ ಆ ನಟನಾ ಕ್ಷೇತ್ರದ ಅತಿರಥ ತಾರೆಯರು

ಅಲ್ಲಿ ಗಳಿಸಿ ಇಲ್ಲಿಯೂ ಉತ್ಪ್ರೇಕ್ಷಿಸಿ ಗಳಿಸುವವರು

ವೈಭವೀಕರಣಕಾಗಿ ಭಾರೀ ಹಣ ದೋಚುವವರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್