ಜೀವದುಸಿರು

ಜೀವದುಸಿರು

ಕವನ

ಜಾಗತಿಕ ಗಾಳಿ ದಿನವಿಂದು

ಜಾಗೃತಿ ಮೂಡಿಸುವುದಿಂದು

ಹೊಸ ಸಂಶೋಧನೆಗಳ ಮಾಡುವರೆಂದು

ಕಾರ್ಯಾಗಾರಗಳ ಹಮ್ಮಿಕೊಳ್ಳುವರಿಂದು

 

ಶುದ್ಧ ಪವನ ಜೀವಕ್ಕೆ ಚೇತನ

ಅಶುದ್ಧ ವಾಯು ರೋಗಕ್ಕೆ ಕಾರಣ

ಹಸಿರು ಸಸ್ಯಗಳ ನೆಡೋಣ ಬನ್ನಿ

ನೀರು ಗೊಬ್ಬರ ಹಾಕೋಣವೆನ್ನಿ

 

ವಾಯು ಮಾಲಿನ್ಯ ತಡೆಯೋಣ

ಪರಿಸರ ಸ್ವಚ್ಛ ಮಾಡೋಣ

ಜಾತಾ ಮೆರವಣಿಗೆ ನಡೆಸೋಣ 

ಮಾಹಿತಿಯನು ಜನರಿಗೆ ನೀಡೋಣ

   

ಮಿತಿಮೀರಿದೆ ಸ್ವಾರ್ಥಿಗಳ ಹಾವಳಿಯೆಲ್ಲ

ಭೂತಾಯಿಯ ಒಡಲನ್ನು ಬಗೆವರೆಲ್ಲ

ತಾಯಿಗೆ ದ್ರೋಹವ ಎಸಗುವರಲ್ಲ

ಬದುಕು ಮೂರಾಬಟ್ಟೆ ಆಗುತಿದೆಯಲ್ಲ

 

ನೀನ್ಯಾಕೆ ಮೌನಿಯಾದೆ  ಬಾಲೆ 

ತೋರಬಾರದೇ ನಿನ್ನ ಲೀಲೆ

ಪ್ರಹಾರ ನೀಡಿ ಬುದ್ಧಿ ಕಲಿಸಬಾರದೇ 

ಕಿಸೆ ತುಂಬಿಸುವ ಕೆಟ್ಟಚಟ ಬಿಡಿಸಬಾರದೇ

 

 ಜಾತಿ -ನೀತಿ ಭೇದಭಾವ ನಿನಗಿಲ್ಲ

ನಮ್ಮೆಲ್ಲರ ಬಾಳಿಗೆ ಜೀವದುಸಿರು ನೀಡುವೆಯಲ್ಲ

ನಾಟ್ಯವಾಡುತ ಜಗವೆಲ್ಲ ಸುತ್ತುವೆಯಲ್ಲ

ಪಂಚಭೂತಗಳಿಗೆ ಸಾಕ್ಷಿಯಾಗಿ ಇರುವೆಯಲ್ಲ

 

ಪ್ರಾಣವಾಯುವನು ರಕ್ಷಿಸುವುದು ಕರ್ತವ್ಯ

ಪೀಳಿಗೆಯ ಭವಿಷ್ಯಕೆ ಕೀಲಿಯಾಗೋಣ

ಪ್ರಕೃತಿ ಮಾತೆಯ ಮಡಿಲ ಬೆಳಗೋಣ

ಕಾಡಿದ್ದರೆ  ನಾಡು ಜೀವದುಳಿವು ಎನ್ನೋಣ 

  

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್