ಜೀವದೊಳಗಿನ ಮೊಗ್ಗು
ಕವನ
ಜೀವದೊಳಗಿನ ಮೊಗ್ಗು
ಹೂವಾಗಿ ಅರಳಿರಲು
ಸೌಗಂಧ ಸೂಸುತಲೆ ಪ್ರೇಮಿಯಾದೆ
ನಗುವಿನಲೆಗಳ ನಡುವೆ
ಕಣ್ಣ ನೋಟದ ಬಗೆಗೆ
ಹತ್ತಿರಕೆ ಸೇರುತಲೆ ಬೆಸುಗೆಯಾದೆ
ನಿನ್ನ ಪ್ರೇಮದ ನೆಲದಿ
ಬಸುರ ಬೀಜವ ಬಿತ್ತಿ
ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ
ಸಸಿಯಾಗಿ ಗಿಡವಾಗಿ
ಮರವಾಗಿ ಬೆಳೆದಿರಲು
ನನ್ನೆದೆಯ ಗುಡಿಯೊಳಗೆ ನೀ ಸೇರಿದೆ
ಚೆಲುವಿನೊಳು ಸತಿಯಾದೆ
ಸುಧೆಯ ಹರಿಸುತ ಹೋದೆ
ನನ್ನೊಲವ ತನುವಿನೊಳು ಬಂಧಿಯಾದೆ
ಮನಸ್ಸಿನೊಳಗಿನ ಮುತ್ತು
ಸೇರುತಲೆ ಸವಿ ಸಮಯ
ಸಾಗುತಲೆ ಬದುಕಿನೊಳು ತೃಪ್ತನಾದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್