ಜೀವನಕ್ಕೆ ಗುರಿಯಂತೆ ಗುರುವೂ ಬೇಕೇ?

ಜೀವನಕ್ಕೆ ಗುರಿಯಂತೆ ಗುರುವೂ ಬೇಕೇ?

ಬರಹ

ನೆನ್ನೆ ರಾತ್ರಿ ನಿತ್ಯಾನಂದ ಎಂಬ ಯೋಗಿಯ ರಾಸಲೀಲೆಯ ಸುದ್ದಿ ಕೇಳಿ ನಿತ್ಯಾನಂದರ ಹಿಂಬಾಲಕರಲ್ಲಿ ಒಬ್ಬರಾದ ನಮ್ಮಮನೆಯವರು ದಿಗ್ಭ್ರಾಂತರಾಗಿ ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಅವರಿಗೆ ನಿತ್ಯಾನಂದರು ಕೇವಲಗುರು ವಷ್ಟೇ ಅಲ್ಲಾ.ನಮ್ಮಮನೆಯವರು ಓದುತ್ತಿದ್ದ ಕಾಲೇಜಿನಲ್ಲಿಯೇ ನಿತ್ಯಾನಂದ(ರಾಜಶೇಖರನ್)ಜೂನಿಯರಾಗಿ ಓದುತ್ತಿದ್ದರಂತೆ.ನಮ್ಮಮನೆಯವರುಒಂದಷ್ಟು ದಿನ ನಿತ್ಯಾನಂದರ ಅಮಲಿಗೆ ಒಳಗಾಗಿದ್ದರು. ಅವರ ಪುಸ್ತಕಗಳನ್ನೆಲ್ಲಾ ಓದುತ್ತಿದ್ದರು. ಅವರ ಕಡಗವನ್ನು ಕೈಗೆ ಕಟ್ಟಿಕೊಂಡಿದ್ದರು.ಜೊತೆಗೆ ಅವರ ಫೋಟೋವಿದ್ದ ರುದ್ರಾಕ್ಷಿಮಾಲೆ ಸಹಾ


ನಾನು ಮೊದಲಿನಿಂದಲೂ ಅವರ "ನಿತ್ಯಾನಂದ"ತೆಯನ್ನು ರೇಗಿಸುತ್ತಲೇ ಇದ್ದೆ. ನನಗವರ ಮೇಲೆ ಅಂತಹ ನಂಬಿಕೆ ಏನೂ ಇರಲಿಲ್ಲ.ಆದರೂ ಅವರ ನಂಬಿಕೆಗೆ ಅಡ್ಡ ಬಂದಿರಲಿಲ್ಲ.ಒಬ್ಬರ ನಂಬಿಕೆ ಅವರಿಗೆ  ಸಂತಸವೀಯುವುದಾದರೆ ಬೇಡ ಎನ್ನಲು ನಾನ್ಯಾರು.ಆದರೆ ನೆನ್ನೆ  ಸನ್ ಟಿವಿ ಅವರ ರಾಸಲೀಲೆಯನ್ನು ಬಿಚ್ಚಿಟ್ಟಿತು.


ಬೆಳಗ್ಗೆಯೂ ನಮ್ಮಮನೆಯವರು ಅದನ್ನೇ ಕೊರಗುತ್ತಿದ್ದರು .ಅದೇ ಸ್ಥಿತಿ. ಕೊನೆಗೆ ತಡೆಯಲಾರದೆ ಕೇಳಿದೆ


"ಅಲ್ಲಾ ನೀವ್ಯಾಕೆ ಅವರನ್ನು ಹಿಂಬಾಲಿಸಬೇಕು?. ಈಗ ನಮಗೆ ನಿಜಕ್ಕೂ ಗುರುವಿನ ಅಗತ್ಯ ಇದ್ಯಾ?"


ನಮ್ಮಮನೆಯವರು ಹೇಳಿದರು


"ಜೀವನದಲ್ಲಿ ಕೆಲವು  ಅರಿವು ಮಾಡಿಸಲು ಒಬ್ಬ ಗುರು ಖಂಡಿತಾ ಬೇಕು. ಎಲ್ಲಾರಿಗೂ ಎಲ್ಲವೂ ತಿಳಿದಿರೋದಿಲ್ಲ. ಹಾಗೆ ಎಲ್ಲವನ್ನೂ ಓದಿ ಅರ್ಥ ಮಾಡಿಕೊಂಡು ಅರಗಿಸಿಕೊಳ್ಳುವ ಶಕ್ತಿ ಎಲ್ಲರಿಗೂ ಇರುವುದಿಲ್ಲ .ಹಾಗಾಗಿ  ಅದನ್ನು ತಿಳಿಸಿ ಹೇಳೊ ಒಬ್ಬರನ್ನ ನಾವು ಡಿಪೆಂಡ್ ಆಗಲೇಬೇಕು.ಅವರು ಹೇಳೋ ಭೋದನೆಗಳನ್ನು ತಲೆ ಮೇಲೆ ಹೊತ್ತುಕೊಂಡು ನಾವು ಆಚರಿಸುತ್ತೇವೆ .ಅಂತಹ ಜನ ತಾವೇ ನಡತೆಗೆಟ್ಟರೆ ಬೇಜಾರಾಗೋದು ಸಹಜ "


"ಹೋಗಲಿ ಬಿಡಿ ನಿಮ್ಮ ಗುರುವಿನ ಆಯ್ಕೆ ಸರಿ ಇರಲಿಲ್ಲ ಅಂದುಕೊಳ್ಳಿ" ಎಂದು  ಸುಮ್ಮನಾದೆ


"ಹಾಗಿದ್ದಲ್ಲಿ ಜೀವನಕ್ಕೆ ಗುರಿ ಥರಾ ಗುರೂನೂ ಬೇಕಾ?" ಇದು ನನ್ನಮನಸಿಗೆ ಬಂದ ಪ್ರಶ್ನೆ


ನನ್ನಮಟ್ಟಿಗೆ ಈ ಬದುಕೇ ಒಂದು ಗುರು ಥರಾ. ಒಂದು ಹಂತಕ್ಕೆಬಂದಮೇಲೆನಮಗೆ ನಾವೇ ಗುರುಗಳಾಗಬೇಕಾಗುತ್ತದೆ. ಯಾರ್ಯಾರನ್ನೋ ಗುರು ಎಂದುಕೊಂಡು ಅವರ ಹಿಂದೆಬಿದ್ದು ಅವರ ಮಾತುಗಳನ್ನು ಅನುಸರಿಸುತ್ತಾ(ಇದು ಕೇವಲ ನಿತ್ಯಾನಂದ ಮ್ಮಾತ್ರವಲ್ಲ. ಎಲ್ಲಾ ಡೋಂಗಿ ಸ್ವಾಮಿಗಳಿಗೂ  ಅನ್ವಯವಾಗುತ್ತದೆ).ಕೊನೆಗೆ ಅವರ ಸಮ್ಮೋಹನಕ್ಕೊಳಗಾಗುವ ಪ್ರಕ್ರಿಯೆ ನಿಜಕ್ಕೂ ಬೇಕಿದೆಯೆ?


ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕೆ ಹೊರತು ಮತ್ತೊಬ್ಬರ ನಕಲಾಗಬಾರದಲ್ಲವೇ? ಎಲ್ಲರೂ ನಡೆದು ತೋರಿಸಿದ ದಾರಿಯಲ್ಲಿ ಸುಲಭವಾಗಿ ನಡೆಯುವುದಕ್ಕಿಂತ ಯಾರೂ ನಡೆಯದದಾರಿಯಲ್ಲಿ ನಡೆದು  ಸಫಲವಾಗುವುದರಲ್ಲಿ ಅರ್ಥವಿದೆಯಲ್ಲವೇ?.


ನೀವೇನೆನ್ನುತ್ತೀರಾ?


[ನಿತ್ಯಾನಂದರ ಬಗ್ಗೆ ಗೂಗಲಿಸಿ ವಿಥ್ ವಿಡಿಯೋ ಸಿಗುತ್ತದೆ ಹಗರಣದ ಸಮೇತ]