ಜೀವನದಲ್ಲಿ ಹೀಗೂ ಆಗುತ್ತೆ!
ಒಂದು ದಿನ ರಾಜು ಅಂಗಡಿಯ ಹತ್ತಿರ ಸಿಗರೇಟ್ ಸೇದುತ್ತಿದ್ದ, ಅಸ್ಟರಲ್ಲಿ ಒಬ್ಬಳು ಬಾಲಕಿ ಬಿಕ್ಷೆ ಬೇಡುತ್ತಾ ಅವನ ಹತ್ತಿರ ಬಂದಳು. ಬಾಲಕಿ ಸರ್ ಸರ್ ಬಿಕ್ಷೆ ಕೊಡಿ ಎಂದು ಕೇಳಿದಳು. ರಾಜು ಚಿಲ್ಲರೆ ಇಲ್ಲ, ಅ ಕಡೆ ಹೋಗಮ್ಮ....... ಎಂದು ಸಿಗರೇಟ್ ಇದ್ದ ಕ್ಯೆಯನ್ನು ಅಲ್ಲಾಡಿಸಿದನು. ಆಗ ಸಿಗರೇಟ್ ನಲ್ಲಿ ಇದ್ದ ಹ್ಯಾಶ್ ಬಿಕ್ಷೆ ಬೇಡುವ ಬಾಲಕಿಯ ಕಣ್ಣಿಗೆ ಬಿತ್ತು. ಬಾಲಕಿ ಏನ್ ಸರ್ ನಿಮಗೆ ಕಣ್ಣು ಕಾಣುವುದಿಲ್ಲವಾ ಎಂದು ಕೇಳಿದಳು. ರಾಜು ಹೇ ಮುಂದೆ ಹೋಗಮ್ಮ....ಎಂದು ಗದರಿಸಿದನು. ಬಾಲಕಿ ಕಣ್ಣನ್ನು ಹೊರಿಸಿಕೊಳ್ಳುತ್ತ ಮುಂದೆ ಹೋದಳು.
ಮಾರನೇ ದಿನ ರಾಜು ಆಫೀಸ್ಗೆ ಬೈಕ್ ಲಿ ಹೋಗುವಾಗ ಟ್ರಾಫಿಕ್ ಸಿಗ್ನಲಲ್ಲಿ ಸಿಕ್ಕಿಕೊಂಡ. ಅವನ ಬೈಕ್ ಮುಂದೆ ಒಂದು ಕಾರ್ ನಿಂತುಕೊಂಡಿತ್ತು. ಆ ಕಾರಿನಲ್ಲಿ ಇದ್ದ ಮನುಷ್ಯ ಸಿಗರೇಟ್ ಸೇದುತ್ತ ಕ್ಯೆಯನ್ನು ಕಾರಿನ ಕಿಟಕಿಯ ಹತ್ತಿರ ಇಟ್ಟ, ಆಗ ಸಿಗರೇಟ್ನಲ್ಲಿ ಇದ್ದ ಹ್ಯಾಶ್ ರಾಜು ಕಣ್ಣಿಗೆ ಬಿತ್ತು. ರಾಜು ಕಣ್ಣನ್ನು ಹೊರಿಸಿಕೊಳ್ಳುತ್ತ ಕೋಪದಲ್ಲಿ ಕಾರಿನಲ್ಲಿ ಇದ್ದ ಮನುಷ್ಯನನ್ನು, "ಏನ್ರಿ ನಿಮಗೆ ಕಣ್ಣು ಕಾಣುವುದಿಲ್ಲವಾ " ಎಂದು ಕೇಳಿದನು. ಕಾರಿನಲ್ಲಿ ಇದ್ದ ಮನುಷ್ಯ " ಹೇ ಮುಂದೆ ಹೋಗಯ್ಯ" ಎಂದುಬಿಟ್ಟ. ಅಸ್ಟರಲ್ಲಿ ಒಬ್ಬಳು ಬಾಲಕಿ ಕಾರಿನಲ್ಲಿ ಇದ್ದ ಮನುಷ್ಯನ ಹತ್ತಿರ ಬಿಕ್ಷೆ ಕೇಳುತ್ತ ಬಂದಳು. ಆಗ ಅವಳು ರಾಜುನ ಸ್ಥಿತಿ ನೋಡಿ ನಕ್ಕಳು. ರಾಜು ಆ ಬಾಲಕಿಯನ್ನು ನೋಡಿ, ಇವಳನ್ನು ಎಲ್ಲೂ ನೋಡಿದ್ದೇನೆ ಎಂದು ಹಿಂದೆ ಆಗಿದ್ದ ಘಟನೆಯನ್ನು ನೆನೆಸಿಕೊಂಡ. ಆಗ ಅವನಿಗೆ ಬಹಳ ಬೇಸರ ಆಯಿತು. ಆಗ ರಾಜು ಬೈಕ್ ನ್ನು ದಾರಿಯ ಬದಿಯಲ್ಲಿ ನಿಲ್ಲಿಸಿ ಮತ್ತೆ ಸಿಗರೇಟ್ ಸೇದಲು ಅಂಗಡಿ ಹತ್ತಿರ ಹೋದ. ಅಸ್ಟರಲ್ಲಿ ಅದೇ ಬಾಲಕಿ ಮತ್ತೆ ಬಿಕ್ಷೆ ಕೇಳುತ್ತ ಅಂಗಡಿಯ ಹತ್ತಿರ ಬಂದಳು. ರಾಜು ಒಂದು ಸಾರಿ ಸಿಗರೇಟ್ ಮತ್ತು ಅವಳನ್ನು ನೋಡಿ, ಸಿಗರೇಟನ್ನು ಸೇದುವ ಬದಲು ಅದನ್ನು ಹಿಂತಿರುಗಿ ಅಂಗಡಿಯವನಿಗೆ ಕೊಟ್ಟು, ಬಾಲಕಿಗೆ ಅದರ ದುಡ್ಡನ್ನು ಕೊಟ್ಟನು. ಬಾಲಕಿ ಕುಶಿಯಾಗಿ ಮುಂದೆ ಹೋದಳು. ರಾಜು ಹಾಗೆ ಯೋಚನೆ ಮಾಡುತ್ತ...ಸಿಗರೇಟ್ ಸೇದುವುದರಿಂದ ಜೆವನಕ್ಕೆ ಅನಾನುಕೂಲವೇ ಹೊರತು ಅನುಕೂಲವೆನು ಇಲ್ಲ ಎಂದುಕೊಂಡು, ಮುಂದೆ ಸಿಗರೇಟ್ ಸೇದುವದನ್ನು ಬಿಟ್ಟುಬಿಡಬೇಕೆಂದು ತೀರ್ಮಾನ ಮಾಡಿ ಅಲ್ಲಿಂದ ಹೋರಟು ಹೋದನು.
ಎಚ್ ಆರ್ ಕೆ
Comments
ಕಥೆ ಸಣ್ಣದಾದರು ಅದರಲ್ಲಿನ ನೀತಿ
In reply to ಕಥೆ ಸಣ್ಣದಾದರು ಅದರಲ್ಲಿನ ನೀತಿ by sathishnasa
ದನ್ಯವಾದಗಳು ಸತೀಶ್ ...:))
In reply to ದನ್ಯವಾದಗಳು ಸತೀಶ್ ...:)) by krishnahr25
ಈ ಪ್ರಸಂಗ ಅವನ ಮನಸ್ಸನ್ನು
In reply to ಈ ಪ್ರಸಂಗ ಅವನ ಮನಸ್ಸನ್ನು by venkatesh
ನಮ್ಮ ಜೀವನವನ್ನು ಸರಿಯಾಗಿ