ಜೀವನ(ದಿ)

ಜೀವನ(ದಿ)

ಕವನ


ಜೀವನವಿದು ಏಳು ಬೀಳುಗಳ ಹಾದಿ,
ಬೀಳುವುದೇ ಜಾಸ್ತಿ, ಏಳುವುದು ಕಡಿಮೆ.

ಜೀವನವಿದು ಕಲ್ಲು ಮುಳ್ಳುಗಳ ಹಾದಿ
ಕಲ್ಲೆಸೆಯುವವರೇ ಎಲ್ಲ,
ತೆರವುಗೊಳಿಸುವವರಿಲ್ಲ.

ಬದುಕು ನಿರಂತರ ಪಯಣ,
ಚುಚ್ಚುವುದು ಬರಿಗಳ ನಡಿಗೆಯಲಿ ಮುಳ್ಳು,
ಸಂಭಂದಿಗಳೆಂಬ ನಾಟಕಕಾರರು,
ಕಾಳಿಲ್ಲ ಇಲ್ಲಿ, ಎಲ್ಲವೂ ಜೊಳ್ಳು !!

ಬದುಕು ಅನವರತ ಸತ್ಯದ ಹುಡುಕಾಟ,
ಅನಂತತೆಯೆಡೆಗಿನ ಪಯಣ ನಿಲ್ಲುವವರೆಗೂ ಬರಿ ಕಾದಾಟ.

ಬದುಕು ನಿಂತ ನೀರಲ್ಲ,
ನಿಜ,
ಆದ್ರೆ ಹರಿವ ನೀರಿಗೂ ಅಡೆತಡೆಗಳು ಉಂಟಲ್ಲ..!
ಕೆಲವು ಸ್ವಯಂಭೂತ,
ಹಲವು ಸ್ವಯಂಕೃತ.

ಎಲ್ಲವುಗಳ ನಡುವೆಯೇ ಈ ಜೀವನ ಸಾಗಬೇಕು.
ನೆಮ್ಮದಿಯ ಹೊರತು ಏಎ ಬದುಕಲ್ಲಿ ಇನ್ನೇನು ಬೇಕು? 

ಚಿತ್ರ್