ಜೀವನದ ಪ್ರಾಮುಖ್ಯತೆ ( ಕವನ )
ಕವನ
ಜೀವನದ ಪ್ರಾಮುಖ್ಯತೆ
ನನ್ನ ದಾರಿಯು ನನಗೆ
ನಿನ್ನದು ನಿನಗೆ
ಎಂಬ ನೆಲೆಯಲಿ ನಾವು
ವಿಘಟಿತರಾದರೆ
ಸಮಾನಾಂತರ ರೇಖೆಗಳು
ಕೂಡುವುದು ಯಾವಾಗ?
ವಿಮುಖತೆಗಳ
ಮುಖಾ ಮುಖಿ ಯಾವಾಗ?
ಜೀವನದ ಪ್ರಾಮುಖ್ಯತೆ
ಅಧಿಕೃತತೆಗಳು
ದಕ್ಕುವುದು ಯಾವಾಗ?
ಮೋಹ ವ್ಯಾಮೋಹ
ಸ್ವ ವಿಮರ್ಶೆ ಸ್ವಾನುಕಂಪ
ತಪ್ಪೊಪ್ಪಿಗೆ ಆತ್ಮದ್ರೋಹ
ಆತ್ಮ ವಿಮರ್ಶೆ ಆತ್ಮ ಲೋಲುಪತೆ
ಅಂತರಂಗದ ವಿಶ್ಲೇಷಣೆ
ಸ್ವಾನುರಕ್ತಿ ಇವುಗಳ
ವ್ಯತ್ಯಾಸ ಹೊಳೆದಾಗ
ಯಾಕೆ ಗೊತ್ತೆ? ಇವುಗಳ
ವ್ಯತ್ಯಾಸ ಬಲು ತೆಳು