ಜೀವನದ ಸತ್ಯ
ಕವನ
ಪೆಟ್ಟು ತಿಂದಿಹ ನೊಂದ ಮನಸಿದು
ಜೀವಯಾನದ ಪಥದಲಿ
ಕೆಟ್ಟ ಮನಗಳ ಮೋಹ ಪಾಶಕೆ
ಮೋಸ ಹೋದೆನು ಬಾಳಲಿ||
ಅಣ್ಣ ತಮ್ಮರು ಅಕ್ಕ ತಂಗಿಯು
ಕರುಳು ಬಂಧನ ಮಿಥ್ಯವು
ಅಪ್ಪ ಅಮ್ಮರು ಸುತರು ಪತ್ನಿಯು
ಜಾದುಗಾರರು ನಿತ್ಯವು
ಕೊಳೆತು ನಾರುವ ಬೀಗ ಬಿಜ್ಜರು
ಅಣುಕನಾಡುವ ನರಿಗಳು
ಬೆರೆತು ಕಷ್ಟಕೆ ಹೆಗಲು ಕೊಡುವರು
ಸ್ನೇಹ ಬಂಧದ ಹುಲಿಗಳು||
ಇಳೆಗೆ ಬರುತಿಹ ಪಿಂಡ ಒಂಟಿಯು
ಹೋಗೊ ಸಮಯದಿ ಒಂಟಿಯೆ
ಬಿಜಲಿ ಕವಿತೆಯ ಪದವು ಹಾಡಲು
ನಾದ ಮೊಳಗಿತು ಗಂಟೆಯ||
ಮೂರು ದಿನಗಳ ಸಂತೆಯೊಳಗಡೆ
ಪಾಪ ಪುಣ್ಯದ ಲೆಕ್ಕವು
ಮೂಲೆ ಮೂಲೆಗು ದಾನ ಧರ್ಮವ
ಮಾಡೆ ಜೀವನ ಚೊಕ್ಕವು||
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
