ಜೀವನಶಾಲೆ

ಜೀವನಶಾಲೆ

ಕವನ
ವರ್ಷ ವರ್ಷಗಳನ್ನು ಸೇರಿಸುತ್ತಿದ್ದೇವೆ ನಮ್ಮ ಬದುಕಿನ ಯಾತ್ರೆಗೆ; ಅರಿವಿನ ಬೆಳಕಿಲ್ಲದೆ ಯಾತ್ರೆಯಲ್ಲಿ ಎತ್ತರಕ್ಕೇರದೆ ಜಾರುತ್ತಿದ್ದೇವೆ ಮುಪ್ಪಿಗೆ; ಬೇಕೆ ನಮ್ಮ ಏಳಿಗೆಗೆ ಮಾಯ-ಮಂತ್ರ; ಮರೆಯಿತ್ತಿದ್ದೇವೆ ತತ್ವಜ್ಯಾನದ ಬೀಜ-ಮಂತ್ರ; ಅರಿವನ್ನು ಸ್ವೀಕರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಇಷ್ಟೇ ಜೀವನವೆಂಬ ಉದಾಸೀನ ಮನದಲ್ಲಿ ಮನೆಮಾಡದೆ; ಜೀವನ ಬರಭೂರ ರಸಭರಿತ ಅನುಭವಗಳ ಜೀವನ ಪಾಠಶಾಲೆ ಅಳವಡಿಸಿಕೊಳ್ಳುವವನ ಜೀವನ ಪಾಕಶಾಲೆ ಎತ್ತೆರೆತ್ತರಕ್ಕೆ ಬೆಳೆಯಬೇಕು ಸಾರ್ಥಕವಾಗಿಸಿಕೊಳ್ಳಬೇಕು ಜೀವನಶಾಲೆ;