ಜೀವನ ಇದೆ ತೆರನಲ್ಲವೆ...?

ಜೀವನ ಇದೆ ತೆರನಲ್ಲವೆ...?

ಕವನ

ಅದೊಂದು ಗಾಢಾಂಧಕಾರದ

ನಿರ್ಜನ ಪ್ರದೇಶ,

ಒಳಗೆ ಹಚ್ಚಿದ ಹಿಲಾಲಿನ

ಸಣ್ಣ ಬೆಳಕು ಮೂಲೆಯಲ್ಲಿ,

ಕಾಲಿಟ್ಟರೆ ಎದುರಿಗೆ

ಲೇಖದ ಕರಿಕಲ್ಲು...!

 

ಕಣ್ತೆರೆದರೆ ಬೃಹತ್

ಬ್ರಹ್ಮರಾಕ್ಷಸ,

ಕುತ್ತಿಗೆಗೆ ಕೈ ಹಾಕಿದ ಅನುಭವ

ಅಯ್ಯೊ...! ಸತ್ತೆ...?

ಬ್ಯಾಟರಿ ಹಚ್ಚಿದೆ ಏನೂ ಇಲ್ಲ,

ಮುನ್ನಡೆದೆ,,,

ಗೋಡೆಯಲ್ಲಿ ಡೋಗಿಯೊಂದು

ಹಲ್ಲು ಕಿಸಿಯುತ್ತಿದೆ....!

 

ಅಂಗೈಯಲ್ಲಿ ಜೀವ

ಹಿಡಿದಿದ್ದೇನೆ,

ಬದುಕುವೇನೋ..?

ಇಲ್ಲವೊ...?

ಇದೇನು ಯಮನ ಮನೆಯೋ..?

ಇಲ್ಲ...ನರಕದ ತಾಣವೋ..?

ಹೇಳುವವರಿಲ್ಲ...?

ಕೇಳುವವರಿಲ್ಲ...?

ನಿಶ್ಯಬ್ದದಲಿ  ಏಕಾಂಗಿಯಾಗಿ

ಪಯಣ ಸಾಗುತ್ತಿದೆ...!

 

ಎದುರಿಗೆ ಕಲ್ಲಿನಲ್ಲಿ

ಲೇಖವೊಂದು ಗೋಚರ..!

ಅದರಲ್ಲಿತ್ತು...ಈ ರಕ್ಕಸ

ಅತೃಪ್ತ ಆತ್ಮ,

ಬದುಕಿದ್ದಾಗ ವೈಭೋಗದಲ್ಲಿದ್ದು

ಜಗದ ಜಂಜಡಗಳಿಂದ

ಜರ್ಜರಿತನಾಗಿ ನೇಣುಕುಣಿಕೆಗೆ

ಶರಣಾಗಿ,,,

ಒಂಟಿಯಾಗಿ  ತಿರುಗುತ್ತಿದೆ...!

 

ನೋಡಿದೆ...?

ಓಡಿದೆ...?

ಆಸೆ ವೈಭೋಗಗಳ 

ತೊರೆದು ಬದುಕಲು ಸಾಧ್ಯವೆ..?

ಈಗ ಕೊಂಚವು ನೆಮ್ಮದಿಯಿಲ್ಲ,

ಜೀವನ ಇದೆ ತೆರನಲ್ಲವೆ...?

-*ಶಂಕರಾನಂದ ಹೆಬ್ಬಾಳ*

 

ಚಿತ್ರ್