ಜೀವನ ಜಾಣತನ

ಜೀವನ ಜಾಣತನ

ಕವನ

 ಹಣದ ಝಂಜಣದ ಕುಣಿತದ ಗಣಿತದಲಿ

ಅಣಕದ ಅನುನಯನದಾದರಣೆಯ ಅನುಕರಣದಲಿ

ಬವಣೆಯ ಬದುಕಿನ ಜಂಜಡದ ಜಂಜಾಟದಲಿ

ಮರಣದ ಚಂಚಲದ ಕುಣಿಕೆಯ ಅನಿಶ್ಚಯತೆಯಲಿ

ಹರಣದ ಭೀತಿಯ ಬವಣೆಯ ಬಲೆಯಲಿ

ಕಾಣದ ಕೈಯ ಬಿಗಿ ಹಿಡಿತದಲಿ

ಅಗಣಿತ ಗುಣಾವಗುಣಗಳ ಕ್ಲೀಷೆಯಲಿ

ಕರುಣೆಯ ಕಾರುಣ್ಯದ ಕಾತರತೆಯಲಿ

ಜೀವನದ ಜೀವ ಕಳೆಯದೆ

ಶರಣರ ಜೀವನದ ನಿತ್ಯ ಸ್ಮರಣೆಯಲಿ

ಕರಣದಲಿ ಸದಾ ಸದಾಶಿವನ ಧ್ಯಾನದಲಿ

ಸುಖವ ಕಾಣುವುದೆ ಜೀವನದ ಜಾಣತನ

 

 

Comments