ಜೀವನ ಧರ್ಮ
ಕವನ
ಜೀವನ ಧರ್ಮ
ಸಾರ್ವಕಾಲಿಕ ಸಾರ್ವದೇಶಿಕ
ಸಾರ್ವಜನಿಕರ ನೀತಿಯು
ಎನ್ನ ಜೀವನ ಧರ್ಮವು ||
ಧರಿಸಬಲ್ಲುದೆ ಧರ್ಮವೆಂಬುದು
ಧರ್ಮವೇ ಧರಿಸಿರುವುದು
ಧಾರಣೆಗೆ ಬಲು ಯೋಗ್ಯವಾದುದು
ಧರ್ಮ ನಿಶ್ಚಯವಾದುದು
ಬಾದರಾಯಣನೆಂದ ಮಾತಿದು
ಸಾರ್ವಕಾಲಿಕವಾದುದು
ಸಾರ್ವಜನಿಕರ ಹಿತಗಳೊಂದಿಗೆ
ಬದುಕೆ ಬದುಕಿನ ಧರ್ಮವು ||
ಧ್ಯೇಯದಮರತೆಯಲ್ಲಿ ತೊಡಗುತ
ಸ್ವಾಭಿಮಾನದ ಪಥದಲಿ
ಕತ್ತಲಿಂದಲೆ ಬೆಳಕಿನತ್ತಲು
ಸಾಗಲರಿವನು ಹೆಚ್ಚಿಸಿ
ನಿತ್ಯನಿರ್ಮಲ ಭಾವದುಲ್ಲಸ
ಸತ್ಯದಿಂದಲೇ ದೊರಕಲಿ
ಕರ್ಮಕೌಶಲ ಬುದ್ಧಿಯಿಂದಲಿ
ಧರ್ಮಮಾರ್ಗದಿ ಹೊಮ್ಮಲಿ ||
ಗ್ರಹಿಸಿ ನಿಗ್ರಹಿಸುತ್ತ ಮನವನು
ಸತ್ಯವನು ಪರಿಗ್ರಹಿಸುತ
ಅಂಜದಳುಕದೆ ಹಿಡಿದ ಮಾರ್ಗದಿ
ನಿರತ ಜಾಗೃತನೆನಿಸುತ
ಧ್ಯೇಯದತ್ತಲ ಸುಪ್ತ ಕಾಮನೆ
ಸಜ್ಜನಿಕೆಯನು ಬಯಸುತ
ವಜ್ರನಿಲುಮೆಯ ದೃಢತೆ, ಭಾವದೆ
ಕುಸುಮ ಕೋಮಲಗೊಳ್ಳುತ ||
- ಸದಾನಂದ
Comments
ಉ: ಜೀವನ ಧರ್ಮ
In reply to ಉ: ಜೀವನ ಧರ್ಮ by ananthaveera
ಉ: ಜೀವನ ಧರ್ಮ
ಉ: ಜೀವನ ಧರ್ಮ
In reply to ಉ: ಜೀವನ ಧರ್ಮ by raghumuliya
ಉ: ಜೀವನ ಧರ್ಮ
ಉ: ಜೀವನ ಧರ್ಮ
In reply to ಉ: ಜೀವನ ಧರ್ಮ by makara
ಉ: ಜೀವನ ಧರ್ಮ