ಜೀವನ ಪಯಣದ ಯಾತ್ರೆ !!!!

4.5

ವರ್ಷಗಳೇ ಹಾಗೆ !!!!
ಸಮುದ್ರದ ತೆರೆಗಳಂತೆ
ತೆರೆಗಳಲ್ಲಿನ ನೋರೆಗಳಂತೆ
ಬರುತ್ತಲೇ ಇರುತ್ತವೆ

ಸಿಹಿ  ಕ್ಷಣಗಳ ತರುತ್ತವೆ  

ಹಿಂದೆಸರಿದು ಮರೆಯಾಗುತ್ತವೆ.ಸಾಧನೆಗಳೇ ಹಾಗೆ !!!!!!
ಶರಧಿಯಲ್ಲಿನ ಬಂಡೆಗಳಂತೆ
ಕಷ್ಟದಲೆಗಳ ಎದುರುನಿಂತು
ನಿರಂತರ ಹೋರಾಡುತ್ತಾ

ಹಿರಿಮೆ ಸಾರುತ್ತವೆ


ಕಷ್ಟಗಳೇ ಹಾಗೆ !!!!!!!
ಕಡಲತಡಿಯ ಮರಳಿನಂತೆ
ಛಲದಲೆಗಳ ಹೊಡೆತತಿಂದು
ನಿರಂತರ ಜಾರುತ್ತಾ 

ಜೀವದಲೆಗಲೊಡನೆ ಮರೆಯಾಗುತ್ತವೆ

ಜೀವನಯಾನವೇ ಹಾಗೆ !!!!!
ಕಡಲನೌಕೆಯ ಯಾನದಂತೆ
ಜೀವನದಲೆಗಳ ಹತ್ತಿಳಿದು
ನಿರಂತರ ಚಲಿಸುತ್ತಾ
ಜೀವನದಂತ್ಯ ತಲುಪುತ್ತದೆ  !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!


ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸುಬ್ರಮಣ್ಯ ಅವರೆ, ಕವನ ತುಂಬಾ ಚೆನ್ನಾಗಿದೆ ಜೀವನವೆಂಬ ಸಮುದ್ರದಲ್ಲಿ ಸಾಗಿಬರುವ ಹಂತ ಹಂತದ ಪರಿಚಯ ನೀಡಿದ್ದಿರಾ ಒಳ್ಳೆಯ ಪ್ರಯತ್ನ

ಬಾಲ ಸುಬ್ರಮಣ್ಯ ಅವ್ರೆ >>>ಚಿತ್ರಗಳೂ ಮತ್ತು ಅವುಗಳ ಜೊತೆಗಿನ ಚುಟುಕುಗಳು ಹಿಡಿಸಿದವು.. ಮೆಚ್ಚುಗೆಯಾದವು..