ಜೀವನ - ಯಾತ್ರೆ
ಕವನ
ಕರಗುತಿದೆ ತನ್ನಷ್ಟಕ್ಕೆ ತಾನು
ಅಂಧಕಾರದಿಂದ ಬೆಳಕಿನಡೆಗೆ
ಸಮರ್ಪಿಸಿ ಕೊಳ್ಳುವುದಷ್ಟೇ
ಬದುಕು ಭಾವದ ಶಿಖೆಯೊಳಗೆ....
ಜೋರಾಗಿ ಗಾಳಿ ಬೀಸಿದರೂ
ನಲುಗಿ ಮತ್ತೆ ಸ್ಥಿರತೆಯೆಡೆಗೆ
ಸಾಧ್ಯಾಸಾಧ್ಯತೆಯ ನಡುವೆ
ಹಿಮ್ಮೆಟ್ಟಿ ಧೃತಿಯ ಕಡೆಗೆ
ನಿನ್ನನ್ನು ನೋಡಿದಾಗಲೆಲ್ಲ
ಸಾಗುವುದು ಜೀವಂತಿಕೆಯೆಡೆಗೆ
ದೇಹದ ಮಡಿವಂತಿಕೆಯಲಿ
ಆತ್ಮಜ್ಯೋತಿಯ ಯಾತ್ರೆಯೆಡೆಗೆ.
-ದೀಪಾ ಪಾವಂಜೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್