ಜೀವಯಾತ್ರೆ

ಜೀವಯಾತ್ರೆ

ಕವನ

ನಶೆಯು ತುಂಬಲು ಮನಕೆ ಕತ್ತಲು

ಹಸಿರು ಕಾಣದೆ ಬೆಟ್ಟವು

ವಶಕೆ ಸಿಗದೆಲೆ ದೂರ ಸಾಗಿರೆ

ಹಸೆಯು ಸಿಕ್ಕದೆ ಬೆತ್ತಲು

 

ಕಸವ ಸುತ್ತಲು ಚೆಲ್ಲಿ ಹೋದರೆ

ಖುಷಿಯ ಬಾಳದು ಹುಟ್ಟದು

ಮುಸಿಯ ನಗುವಲಿ ಕೆಸರು ಮೆತ್ತಿರೆ

ಕುಸುರಿ ಕೆಲಸವು ಬೆಳಗದು

 

ಯಶದ ಹಾದಿಯ ತುಳಿದು ಸಾಗಿರೆ

ವಿಷಯ ಕಲಿಯುತ ಬದುಕಲು

ಕಸಿಯ ಕಟ್ಟಲು ಹೂವು ಗಿಡದೆಲೆ

ಹುಸಿಯ ಹೇಳದೆ ನಕ್ಕಿತು

***

ನಮನವೆನ್ನುವೆ

ಗೋವಿಂದ ಪೈಗಳೇ

ನಿಮಗಿದೋ ನಮನ

ನಿಮ್ಮ ಬರಹಗಳೇ

ನಮಗಿಂದು ಸ್ಪೂರ್ತಿ

 

ಪ್ರೀತಿಸುವ ಗುಣವ

ನಿಮ್ಮಿಂದ ಕಲಿತೆವು

ಸಾಧನೆಯ ಛಲವ

ಅರಿತು ಬೆಳೆದೆವು

 

ನೀವು ಬರೆದಿರುವ

ಬರಹ ಅಮೃತವು

ಸೇವಿಸುತ ಸಾಗಲು

ಕವಿಯೊಲುಮೆಯಿಂದು

 

ತಮ್ಮ ನಡೆ ನುಡಿಯು

ನಮ್ಮೊಳಗೆ ತುಂಬಲಿ

ನಿಮ್ಮಂತೆ ಬೆಳಗಲು

ಬಾನಿಂದ ಹರಸಿರಿ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್