ಜೀವಾಳ ಸಂಗಾತಿ..
ಕವನ
ಮನಸ್ಸೆಂಬ ತೋಟದಲ್ಲಿ ಹೂ ಆಗಿ
ಅರಳಿದೆ ನೀನು
ಮೋಡವಾದ ಪ್ರೀತಿಯನ್ನು ಕರಗಿಸಿ
ಮಳೆ ಹನಿಯಾದೆ ನೀನು
ಎಲೆಯಾಗಿ ನಾನು ಬೆಳೆದರೆ
ಹಸಿರು ಬಣ್ಣ ನೀಡಿದೆ ನೀನು
ಹನಿಯಾಗಿರುವ ನನಗೆ
ಮುತ್ತಾಗಿ ಬದಲಾಯಿಸಿದೆ ನೀನು
ಬಡಿಗ ಕೆತ್ತಿದ ವೀಣೆ ನಾನು
ಇಂಪಾಗಿ ಕೇಳುವ ನಾದ ನೀನು
ಕಲ್ಲು ಮಣ್ಣಾಗಿದ್ದ ನನಗೆ
ಶಿಲೆಯಾಗಿ ಕೆತ್ತಿದ ಶಿಲ್ಪಿ ನೀನು
ದುಂಬಿಯಾಗಿ ನಾನು ಬಂದರೆ
ಸಿಹಿಯನ್ನು ನೀಡುವ ಹೂ ನೀನು
ದೇವರು ಸೃಷ್ಟಿಸಿದ ದೇಹ ನಾನು
ಅದರಲ್ಲಿರುವ ಜೀವ ನೀನು
ಪ್ರೀತಿ ತೋರಿಸಿದೆ ನೀನು
ಹೀಗೆ ಹೂ ಆಗಿ ಅರಳಿ ಬಂದ
ನನ್ನ ಮನಸ್ಸೆಂಬ ಸೌಂದರ್ಯಕ್ಕೆ
ಕೀರ್ತಿ ತಂದು ಕೊಟ್ಟ
ನನ್ನ ಜೀವಾಳ ಸಂಗಾತಿ ನೀನು..
Comments
ಉ: ಜೀವಾಳ ಸಂಗಾತಿ..