ಜೀವೋತ್ಸವ

ಜೀವೋತ್ಸವ

ಕವನ

1

 

ವಠಾರದಿಂದ ನಿತ್ಯ ಕೇಳುತ್ತದೆ

ಮಕ್ಕಳ ನಗು ಕೇಕೆ ಚಪ್ಪಾಳೆ...

 

ಅಲ್ಲಿ ಶಾಲೆಗಿನ್ನೂ ಸೇರದ ಮಕ್ಕಳು

ಪುರಾಣ ಪುಸ್ತಕ ಮುಟ್ಟದ ವೃದ್ಧರು

ಮೊಬೈಲು ಹಿಡಿಯದ ಹೆಂಗೆಳೆಯರು

ಇರುವ ಪುರಾವೆ ಇವು

ಜೀವೋತ್ಸವದ ತಾಣವೂ!

 

2

 

ಎಳೆಯ ಮುಖದಲ್ಲಿ ನಗು ಅರಳಿದೆ

ಎಲ್ಲರೊಂದಿಗೆ ಬೆರೆತು ಆಡಿದೆ

ಅಂದರೆ ತಿಳಿಯುತ್ತದೆ

ಟಿವಿ ಪರದೆ ದೂರ ಸರಿದಿದೆ

ಮೊಬೈಲು ಚಟ ಅಂಟದೆ

ಮಗು ಮಗುವಾಗಿದೆ

 

‌                      - ಅನಂತ ರಮೇಶ್

ಚಿತ್ರ್