ಜೀವ ಮತ್ತು ಸಾವು

ಜೀವ ಮತ್ತು ಸಾವು

ಕವನ

ಜೀವ ಕಡಲಲಿ ತೇಲಿ ಸಾಗಿದೆ

ದೇವ ಕರುಣೆಯ ಜೊತೆಯಲಿ

ಕಾವ ನಮ್ಮನು ಪೊರೆಯುತ

ಜಾವ ಬೇಗದಿಯೆದ್ದು ಮೀಯಲು

ಹೂವ ಕೊಯ್ಯುತ ದೇವಗರ್ಪಿಸಿ

ಬೇವು ಬೆಲ್ಲವ ತಿನ್ನುತ

 

ದುಡಿಮೆಯಿಲ್ಲದೆ ಬದುಕು ಸಾಧ್ಯವೆ

ಕಡಿಮೆ ಹಣವದುಯಿರಲು ಬಳಿಯಲಿ

ಕುಡಿತ ಕಂಡಿತು ಬಾಳಲಿ

ಕಡಿತವಾಯಿತು ಪ್ರೀತಿಯೊಲವದು

ಬಡಿತ ಕಾಣಲು ಮನೆಯವೊಳಗಡೆ

ಬೊಡಿದು ಹೋಯಿತು ವಯಸಲಿ

 

ಮನವು ಕೊರಗಲು ಸುಪ್ತ ಭಾವನೆ

ತನುವ ಚೆಲುವದು ಕರಗಲು

ಜನವು ದೂರಕೆ ಹೋಗಲು

ಕಣವು ಮುತ್ತಲು ದೇಹವೇದನೆ

ಕುಣಿಯ ತೋಡುತ ಗೋರಿಯಾಗಲು

ಹೆಣದ ರೂಪದಿ ಮಲಗಿತು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್