ಜುಲ್ ಕಾಫಿಯಾ ಗಝಲ್

ಜುಲ್ ಕಾಫಿಯಾ ಗಝಲ್

ಕವನ

ಪ್ರೀತಿ ಪ್ರೇಮದ ಬಲೆಯಲ್ಲಿ

ಸಿಲ್ಕಿದೆಯಲ್ಲ ನೀನು||

ಭೀತಿಯಿಲ್ಲದೆ ಮೋಹದಲ್ಲಿ

ಅಪ್ಪಿದೆಯಲ್ಲ ನೀನು||

 

ನಲ್ಲನ ಸ್ವರ್ಗಸುಖ ಸ್ಪರ್ಶದಲ್ಲಿ

ಒಲವನ್ನು ಕಾಣುತಿರುವೆ|

ಚಲ್ಲುತ ನಗೆಯನ್ನು ಭಾವದಲ್ಲಿ

ತೇಲಿದೆಯಲ್ಲ ನೀನು||

 

ಕಡಲಿನ ತೆರೆಗಳಂತೆ ಉಕ್ಕಿ

ಬರುತಿವೆ ನಿಶ್ಯಬ್ದ ಅಲೆಗಳು|

ಮೂಡಣ ರವಿಯಂತೆ ಬಾಂದಳದಲ್ಲಿ

ಹೊಳೆದೆಯಲ್ಲ ನೀನು||

 

ಸೆಂದುರದ ಬಣ್ಣವನು ತುಟಿಗೆ

ಹಚ್ಚಿ ಚುಂಬಿಸುತಿರುವೆ|

ನಂದನದ ವಿಹಗದಂತೆ ಎದೆಯ

ಮುಗಿಲಿನಲ್ಲಿ ಹಾರಿದೆಯಲ್ಲ ನೀನು||

 

ಶುಕ್ತಿಯಲ್ಲಿ ಹೊಳೆಯುವ ಸ್ವಾತಿ

ಮುತ್ತಾಗಿ ಸಾಗರದಲ್ಲಿರುವೆ|

ಮುಕ್ತಿಯನು ನೀಡಲು ಅಭಿನವನ

ಕಾವ್ಯದಲ್ಲಿ ಮಿಂಚಿದೆಯಲ್ಲ ನೀನು||

 

*ಶಂಕರಾನಂದ ಹೆಬ್ಬಾಳ* 

 

ಚಿತ್ರ್