ಜೂಳೆಯಾದ ಹೊಳಪು

ಜೂಳೆಯಾದ ಹೊಳಪು

ಕವನ

ಜೂಳೆಯವು ಬೈತಲೆಲಿ

ಡಾಳಯಿಸಿ ರಂಜಿಸಿದೆ

ತಾಳೋಲೆ ಚೆಲುವಲ್ಲಿ ಶೋಭಿಸುವಳು

ತೋಳುಬಂದಿಯ ಹೆಣ್ಣು

ˌನೀಳಕಾಯದ ಚೆಲ್ವಿ

ಪಾಳದಲಿ ಪದಕವದು ಮಿಂಚುತಿಹುದು||

 

ಮಾನಿನಿಯ ಸುಂದರತೆ

ಕಾನನದ ಶಾಡ್ವಲವು

ಬಾನಿನಲಿ ಚೆಲಿಸುವ ಚಂದ್ರನಂತೆ|

ಗಾನವದು ಪಾಡುತಲಿ

ತಾನನದ ಪಾರಮ್ಯ

ಮೋನದಲೆ ಸಾಗುತಿಹ ತಾರೆಯಂತೆ||

 

ಹಸನ್ಮುಖಿ ಮೊಗದಲ್ಲಿ

ಯಶದಲ್ಲಿ ಬೀಗುತಿದೆ

ಪಸಿರ್ಗಲ್  ರತ್ನದಲಿ ಝೇಂಕರಿಸುತ|

ಬೆಸುಗೆಯಲಿ ಬಂಧಿಸಿದೆ

ಮುಸುಕನ್ನು ತೆರೆಯುತ್ತ

ಬಸಂತದ ಕೋಗಿಲೆಯ ಕಂಪಂತೆಯೆ||

 

ಕಂಜರದ ನಡೆಯವಳು

ಮಂಜಿನಲಿ ಮೆರೆಯುತ್ತ

ಮಂಜುಳದ ಗಾನವನು ಪಾಡುತಿಹೆ

ರಂಜಿಸುತ ಮನವನ್ನು

ಪಂಜಿನಲಿ ಮೇಳೈಸಿ

ಸಂಜೆಸುಧೆ ಲಾಲೈಸಿ ನಿಂತಿಹಳು||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್