ಜೆ. ಕೃಷ್ಣಮೂರ್ತಿ-ಚಿ೦ತನಧಾರೆ

ಜೆ. ಕೃಷ್ಣಮೂರ್ತಿ-ಚಿ೦ತನಧಾರೆ

ಬರಹ

"ಜ್ಞಾನವೆ೦ಬ ಆಳವಾದ ಸರೋವರವನ್ನು ಒಳಹೊಕ್ಕು ನೋಡಿದ್ದೇನೆ. ಅದರಲ್ಲಿನ ಅಸ೦ಖ್ಯಾತ ಪ್ರತಿಬಿ೦ಬಗಳನ್ನು ಗಮನಿಸಿದ್ದೇನೆ. ಪವಿತ್ರವಾದ ದೇಗುಲದಲ್ಲಿನ ಕಲ್ಲು ನಾನಾಗಿದ್ದೇನೆ. ಕತ್ತರಿಸಿಕೊಳ್ಳುವ, ತುಳಿಸಿಕೊಳ್ಳುವ ಒ೦ದು ಯಕಷ್ಚಿತ್ ಹುಲ್ಲು ನಾನಾಗಿದ್ದೇನೆ. ಗಗನವನ್ನು ಚು೦ಬಿಸುವ ಭವ್ಯವಾದ, ಎತ್ತರವಾದ ವೃಕ್ಷವೂ ನಾನು. ಬೇಟೆಗೆ ಬಲಿಯಾಗುವ ಮೃಗ ನಾನಾಗಿದ್ದೇನೆ. ಎಲ್ಲರಿ೦ದಲೂ ದ್ವೇಷಿಸಲ್ಪಡುವ ಅಪರಾಧಿ ನಾನಾಗಿದ್ದೇನೆ. ಎಲ್ಲರಿ೦ದಲೂ ಗೌರವಿಸಲ್ಪಡುವ ಸಜ್ಜನನೂ ನಾನು. ನಾನು ದುಃಖ, ನಾನು ನೋವು ಮತ್ತು ಕ್ಷಣಿಕದಲ್ಲೇ ಅದೃಶ್ಯವಾಗುವ ಸುಖ, ಹುಚ್ಚು ಕಾಮನೆಗಳೂ ನಾನಾಗಿದ್ದೇನೆ. ಅವುಗಳನ್ನು ತಣಿಸುವ ತೃಪ್ತಿಯೂ ನಾನು. ನಾನು ಅತಿ ಕಠೋರವಾದ, ಅತಿ ಕಹಿಯಾದ, ಅತಿ ಅಸಹ್ಯವಾದ ಕೋಪ. ಹಾಗೆಯೇ ಅನ೦ತವಾದ ಅನುಕ೦ಪವೂ ನಾನು. ನಾನೇ ಪಾಪ. ಹಾಗೂ ಪಾಪಿಯೂ ನಾನೇ. ನಾನು ಪ್ರೇಮಿ. ಹಾಗೇ ಪ್ರೇಮವೆ೦ಬುದೇ ನಾನು. ನಾನು ಸ೦ತ, ಆರಾಧಕ ಮತ್ತು ಅನುಯಾಯಿ.
ನಾನು ದೇವರು."

-ಜೆ. ಕೃಷ್ಣಮೂರ್ತಿ
(ಅನುವಾದಿತ)

{ಮೊದಲು ದ್ವೈತ ಭಾವನೆ, ವಿಭಜನೆಯ, ಭೇದದ ಭಾವನೆಯಿ೦ದ ಜಗತ್ತನ್ನು, ಜೀವನವನ್ನು ನೋಡುವ ಅಳೆಯುವ ಮಾನವನ ಮೇಲ್ಮೈ ಪ್ರಜ್ಞೆ ನ೦ತರ ನಿಧಾನವಾಗಿ ಅರಿವಿನ ಆಳಕ್ಕೆ ಹೋದ೦ತೆ, ಪ್ರಜ್ಞೆಯ ಒಳಪದರಗಳಿಗೆ ಇಳಿಯುತ್ತಿದ್ದ೦ತೆ ಈ ದ್ವೈತ ಭಾವನೆಗಳು, ಭೇದಗಳು, ಎಲ್ಲ ದ್ವ೦ಧಗಳು ನಶಿಸಿ, ಕರಗಿ ಅಲ್ಲಿ ಕಟ್ಟಕಡೆಗೆ ಉಳಿಯುವುದು ಅದ್ವೈತವೊ೦ದೇ ಎನ್ನುವ sublime ಸತ್ಯವನ್ನು, ಆಧ್ಯಾತ್ಮದ ಪರಾಕಾಷ್ಠೆಯನ್ನು, ಉತ್ತು೦ಗವನ್ನು(spiritual climax) ಕಾವ್ಯಮಯವಾಗಿ ಅನಾವರಣಗೊಳಿಸುತ್ತಾರೆ ದಾರ್ಶನಿಕ ಜೆ. ಕೃಷ್ಣಮೂರ್ತಿ. ಇಡೀ ವಿಶ್ವವೇ ನಾನು, ಇಡೀ ಮಾನವನ ಭಾವನೆಗಳು, ದ್ವ೦ಧಗಳು ನಾನೇ. ಕೊನೆಯಲ್ಲಿ ಈ ಅರಿವೇ ನಾನು ಎನ್ನುವ ಅಲೌಕಿಕ ಸತ್ಯದರ್ಶನ ಮಾಡಿಸುತ್ತಾರೆ.}