ಜೇಡರ ಬಲೆ

ಜೇಡರ ಬಲೆ

ಬರಹ

ಏಕತಾನತೆಯ ಭೂತ
ಕಾಡುತಿಹುದು ಸತತ
ಬೆನ್ನತ್ತಿ ಬರುತಿದೆ
ನೊಂದ ನನ್ನ ಬಿಡದೆ

ಎಷ್ಟೊಂದು ಘೋರ
ಇನ್ನೆಷ್ಟು ದೂರ
ಏಕಾಂಗಿ ನಾನು
ಬಂದೊಮ್ಮೆ ನೋಡ

ಎಲ್ಲೆಲ್ಲು ಕಗ್ಗತ್ತಲು
ಸುತ್ತಿ ಬಳಸಿವೆ ನೂರಾರು
ದ್ವೇಷ ರಾಗದ ತಂತಿಗಳು
ಮೀಟಿದ ಹಾಡ ಕೇಳುವವರಾರು

ನಾ ಹೆಣೆದ ಜೇಡರ ಬಲೆ
ನನ್ನೇ ಮುತ್ತಿದೆ ಇಂದು
ತಿಳಿಯದೆ ಸೇರಿದ ನೆಲೆ
ಯಿಂದ ಹೊರಬರುವೆನು ನಾ ಎಂದು

ಬಿಡುಗಡೆಯ ಕೋರಿ
ಕೂಗುವೆನು ಪ್ರತಿಸಾರಿ
ಬಿಟ್ಟು ಬಂದವರನು
ನಾ ಎಂದು ಸೇರುವೆನು