ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ

ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ

ಬರಹ

ಜೇನು ತುಪ್ಪ ಆಹಾ - ರಘೋತ್ತಮ್ ಕೊಪ್ಪರ

ಜೇನುತುಪ್ಪ ಎಂದೊಡನೆ ಎಲ್ಲರೂ ಬಾಯಿ ಚಪ್ಪರಿಸುವುದು ಗ್ಯಾರಂಟಿ. ಜೇನಿನ ಸಿಹಿ ಆ ರೀತಿಯಿದೆ. ಹಾಲು ಜೇನು ಒಂದಾದರೆ ಅದರ ಸ್ವಾದವನ್ನು ಬಣ್ಣಿಸಲಾಗದು. ಈ ತರಹದ ವಾಕ್ಯಗಳನ್ನು ಕೇಳುವುದು ಸಾಮಾನ್ಯ. ಜೇನು ಬರೀ ಸಿಹಿ ಅಷ್ಟೆ ಅಲ್ಲ. ಅದರಿಂದ ಅನೇಕ ಉಪಯೋಗಗಳಿವೆ ಅಂತ ನಮ್ಮ ಮಿತ್ರ ಡಾ.ಪ್ರದೀಪ್ ಹಾದಿಮನಿ ಅವರು ಚಿಕ್ಕ ಹುಡುಗರಿಗೆಲ್ಲ ಹೇಳುತ್ತಿದ್ದರು. ಆಗ ನಾನು ಬಾಗಿಲು ತಟ್ಟಿದೆ. ಒಳಗಡೆ ಹುಡುಗರ ಪ್ರಶ್ನೆ ಗಳನ್ನು ಆಲಿಸುತ್ತಿದ್ದ ಡಾಕ್ಟರಿಗೆ ನನ್ನ ದನಿ ಕೇಳಿಸಲೇ ಇಲ್ಲ. ಇನ್ನು ಜೋರಾಗಿ ಕೂಗಿದಾಗ ಓ ರಘು ಬಾರಪ್ಪ ಬಾ ಒಳಗೆ. ಯಾವಾಗ ಬಂದೆ ಬೆಂಗಳೂರಿನಿಂದ. ಹೇಗಿದೆ ಕೆಲಸ ಇತ್ಯಾದಿಗಳ ಬಗ್ಗೆ ವಿಚಾರಿಸಿದರು. ಆಗ ನಾನು ಪ್ರದೀಪ್ ಆ ಹುಡುಗರಿಗೆ ಜೇನಿನ ಬಗ್ಗೆ ಏನೋ ಹೇಳ್ತಾ ಇದ್ರಲ್ಲ ಅಂದೆ. ಅವರು ಜೇನು ತುಪ್ಪದ ಬಗ್ಗೆ ದೊಡ್ಡ ಭಾಷಣವನ್ನೇ ಬಿಗಿದರು. ಅದರಲ್ಲಿ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಜೇನು ತುಪ್ಪ ಆರೋಗ್ಯಕ್ಕೆ ಒಳ್ಳೆಯದು.

ಯಾರಿಗೆ ಹೆಚ್ಚು ಉಪಯುಕ್ತ?
ದೃಷ್ಟಿ ದೋಷ ಇದ್ದವರು ಗಜ್ಜರಿ ರಸದೊಂದಿಗೆ ಜೇನು ತುಪ್ಪ ಬೆರೆಸಿ ಸೇವಿಸಬೇಕು. ಊಟಕ್ಕೆ ಒಂದು ಗಂಟೆ ಮೊದಲು ಈ ರಸವನ್ನು ಸೇವಿಸಿ. ರಕ್ತ ಶುದ್ಢ ಮಾಡಲು ಮತ್ತು ಬೊಜ್ಜು ಕರಗಿಸಲು ಇದು ಸಹಾಯ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರಿನ ಜೊತೆ ೧ ಚಮಚ ಜೇನು ತುಪ್ಪ ಮತ್ತು ೧ ಚಮಚ ನಿಂಬೆ ರಸ ಸೇರಿಸಿ ಸೇವಿಸಿ. ಅಸ್ತಮಾ ಮತ್ತು ಇನ್ನು ಅನೇಕ ರೋಗ ಗಳಿಗೆ ಇದು ಒಳ್ಳೇ ಔಷಧಿ.
ಅಯ್ಯೋ ಇಲ್ಲಿ ಕರೆಂಟು ಹೋಯಿತು. ಇನ್ನು ಹೆಚ್ಚಿನ ಮಾಹಿತಿ ಬೇಕೆಂದರೆ ಸಂಪರ್ಕಿಸುವ ತಾಣ: http://www.ayurveda -herbal-remedy. com/ayurvedic- tips/honey. html