ಜೇನು ನೊಣ [ಬಾಲಗೀತೆ]
ಕವನ
ಅರಳಿದ ಹೂವಿನ ನಡುವಲಿ ಕುಳಿತಿದೆ
ಏನಿದು ಬೇಗನೆ ಹೇಳಮ್ಮ
ಹೂವಿನ ಒಳಗಿನ ಹಳದಿಯ ಭಾಗವ
ತಿನ್ನುತಲಿರುವುದು ನೋಡಮ್ಮ
ಹೂಗಳ ನಡುವಲಿ ಕಾಣುತಲಿರುವುದು
ಜೇನನು ಹೊಂದಿದ ಮಕರಂದ
ಜೇನಿನ ನೊಣವದು ಶೇಖರಿಸಿಡುವುದು
ಸಂಗ್ರಹಕಿಳಿದಿದೆ ಹೂವಿಂದ
ಚಂದದ ಹೂವನು ಕೆಡಿಸದೆ ಈ ನೊಣ
ಏನಿದೆ ಲಾಭವು ಅದರಿಂದ?
ಬಾರದ ಹಾಗೆಯೆ ಮಾಡಲಿಕಾಗದೆ
ರಕ್ಷಿಸು ಸುಮಗಳ ನೊಣದಿಂದ
ಅನುದಿನ ಜೇನನು ಬೇಡುತ ಸವಿಯುವೆ
ನಮಗದು ಸಿಗುವುದು ಇದರಿಂದ
ಫಲಗಳು ದೊರೆಯಲು ಇವುಗಳ ಶ್ರಮವಿದೆ
ಶಂಕೆಯ ಕಳೆವುದು ಮನದಿಂದ||
(ಕಂದನ ಪ್ರಶ್ನೆ,ತಾಯಿಯ ಉತ್ತರ)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್
