ಜೈನ‌ ಜನಪದ‌ ಗೀತೆಗಳು

ಜೈನ‌ ಜನಪದ‌ ಗೀತೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಸ್. ಪಿ.ಪದ್ಮ‌ ಪ್ರಸಾದ್ (ಸ0)
ಪ್ರಕಾಶಕರು
ಕರ್ನಾಟಕ‌ ಜಾನಪದ‌ ಅಕಾಡೆಮಿ
ಪುಸ್ತಕದ ಬೆಲೆ
ರೂ.50

ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು ಹೊರಬ0ದಿವೆ. ಇದಕ್ಕೆ ಕರ್ನಾಟಕದ ಸರ್ಕಾರಗಳೂ ಕಾಲಕಾಲಕ್ಕೆ ನೆರವು ನೀಡಿವೆ ಎ0ಬುದು ಮೆಚ್ಚ‌ಬೇಕಾದ ಅ0ಶ‌.

   ಈ ಮಾಲಿಕೆಗೆ ಜೈನ‌ ಜನಪದ‌ ಗೀತೆಗಳ ಸ0ಪುಟವೊ0ದನ್ನು ಸ0ಪಾದಿಸಿ ಕೊಡುವ0ತೆ ನನ್ನನ್ನು ಕೋರಿಕೊ0ಡದ್ದ್ದರ‌ ಫಲವಾಗಿ ನಾನು ಇದನ್ನು ಸ0ಪಾದಿಸಿಕೊಟ್ಟು ಐದು ವರ್ಷಗಳೇ ಕಳೆದಿದ್ದವು. ಇದೀಗ ಸಿದ್ಧಗೊಡಿದೆ. 300 ಪುಟಗಳ‌ ಈ ಪುಸ್ತಕದಲ್ಲಿ ಈ ವರೆಗೆ ಸ0ಗ್ರಹಗೊ0ಡಿರುವ‌ ಬಹುತೇಕ‌ ಎಲ್ಲ ಜೈನ‌ ಜನಪದಗೀತೆಗಳು, ಐತಿಹ್ಯಗಳು, ಗಾದೆಗಳು, ಹಾಗೂ ಒಡಪುಗಳಿವೆ.ಕೆಲವು ಸ್ಥಳನಾಮಗಳ‌ ಮೇಲೆ ಜೈನ‌ ಪ್ರಭಾವವಿರುವುದನು ಗುರುತಿಸುವ‌ ಟಿಪ್ಪಣಿ ಇದೆ. ಅಲ್ಲದೆ ಪ್ರಕಟಿತ‌ ಜೈನ‌ ಕಾವ್ಯಗಳಲ್ಲಿ ಹಾಗೂ ಗದ್ಯಕ್ಱುತಿಗಳಲ್ಲಿನ‌ ಕತೆಗಳಲ್ಲಿ ನ‌ ಜನಪದ‌ ಕತೆಗಳ‌ ಬಗೆಗಿನ‌ ಒ0ದು ಲೇಖ‌ನವೂ  ಅನುಬ0ಧದಲ್ಲಿದೆ.

   ಜೈನ‌ ಜಾನಪದದ‌ ಬಗ್ಗೆ ಅಧ್ಯಯನ‌ ಮಾಡಬೇಕೆನ್ನುವವರಿಗೆ ಎಲ್ಲ‌ ಮೂಲ‌ ಸಾಮಗ್ರಿ ಒ0ದೆಡೆ ಸಿಗುವ0ತಿದೆ.