"ಜೈಲು ವಾಸ ನಿಜವಾದ ಶಿಕ್ಷೆಯೇ?"
ಜೈಲಿಗೆ ಹಾಕಿದ್ದಾರೆ ಎಂದು ಕೇಳಿದ ತಕ್ಷಣ ಬೆಚ್ಚಿಬೀಳುವ ಕಾಲ ಇದಲ್ಲ.
ಇದೊಂದು ಸಾಮಾನ್ಯ ಪ್ರಕ್ರಿಯೆ ಈಗ.
ಅಧಿಕಾರ -ಸಂಪತ್ತನ್ನು ಪಡೆಯಬೇಕೆಂದರೆ ಕೆಲದಿನಗಳ ಈ ಸ್ಥಿತ್ಯಂತರ ಅನಿವಾರ್ಯ ಎಂಬಂತೆ ಈಗ ಸ್ವೀಕೃತವಾಗಿದೆ.
ಒಳ್ಲೆಯದಕ್ಕೂ, ಕೆಟ್ಟದಕ್ಕೂ ಹೋಗಿಬರಬೇಕಾದ ಒಂದೇ ತಾಣ ಈ ಜೈಲು.
ಹೇಗೂ ಯಾವುದೇ ಕಾರಣಕ್ಕೆ ಒಳಹೋಗಿಬಂದರೂ ಕೊನೆಗೆ ಸಂಭ್ರಮದ ಸ್ವಾಗತಕ್ಕೇನೂ ಕೊರತೆಯಿಲ್ಲ ಇಲ್ಲಿ. ಅಂಥ ಜನರ ಪಡೆಯೂ ಸಿದ್ದವಾಗಿದೆಯಲ್ಲ?
ಹಾಗಾದರೆ ಇವತ್ತಿನ ಬಹುದೊಡ್ಡ "ಕಣ್ಕಟ್ಟು" ಈ ಜೈಲು ವಾಸ ಎಂಬ ಹಳಸಲು ಪದ ಅನ್ನಬಹುದೇನೋ?
ಆದರೆ ಇದೇ ಪರಮ ಶಿಕ್ಷೆ ಎಂಬಂತೆ ಎಲ್ಲರೂ( ರಾಜಕಾರಣಿಗಳೂ ಸೇರಿದಂತೆ) ಮಾತಾಡುವುದು ಒಂದು safe zone ಮಾಡಿಕೊಂಡೇ?
ನಿಜಕ್ಕೂ ಇದು ಬುದ್ದಿ ಕಲಿಸುವ ಒಂದು ಸಾಧನವಾಗಿ ಇನ್ನು ಉಳಿದಿಲ್ಲ ಎಂದು ತಿಳಿಯುವುದಾದರೆ ಬೇರೆ ಯಾವರೀತಿಯಲ್ಲಿ "ಶಿಕ್ಷೆ" ಯನ್ನು ರೂಪಿಸಬೇಕಾಗಬಹುದು ನಮ್ಮ ಜನತಂತ್ರದಲ್ಲಿ?
ಜಾಯಮಾನವೇ ದುಷ್ಟಪ್ರಕೃತಿಯಿಂದ ಕೂಡಿದ್ದರೆ ಅದು ಯಾವ "ಶಿಕ್ಷೆ" ಯಿಂದಲೂ ಬಗ್ಗಲಾರದು. ......... ಹೊಸ ಹೊಸ ತಂತ್ರ,ಮಾರುವೇಶ, ಮಾತುಗಳಿಂದ ಅದು ಎಗರಿ ಬರುತ್ತಲೇ ಇರುತ್ತದೆ. ವಂಚಿಸುತ್ತಲೇ ಇರುತ್ತದೆ.
ಆದ್ದರಿಂದ ಈ ಶಿಕ್ಷೆ ಎಂಬ ’ಕಣ್ಕಟ್ಟನ್ನು’ ನೆಚ್ಚುವುದು ನಮ್ಮ ಮೂರ್ಖತನವಾಗಬಾರದು.....
Comments
ಉ: "ಜೈಲು ವಾಸ ನಿಜವಾದ ಶಿಕ್ಷೆಯೇ?"