ಜೈ ಜೈ ನನ್ನ ಭಾರತ

ಜೈ ಜೈ ನನ್ನ ಭಾರತ

ಕವನ

ಜೈ ಜೈ ನನ್ನ ಭಾರತ

ಇದುವೇ ನಮ್ಮ ಭಾರತ॥

 

ಭವ್ಯ ಸಂಸ್ಕೃತಿಯ ಭಾರತ

ತನ್ನ ಹಿರಿಮೆಯ ಹೇಳುತ

ಗಂಗೇ ತುಂಗೇ ಹರಿಯುತ

ಹಿಮಾಲಯವೇ ನಿಲ್ಲುತ॥

 

ವನ ಸಿರಿಗಳ ಭಾರತ

ಗಂಧದ ಗಾಳಿ ಬೀಸುತ

ಇದು ಎಲ್ಲರ ನೆಚ್ಚಿನ ಭಾರತ

ಹೆಮ್ಮೆ ಹಿರಿಮೆಯಿಂ ಬೀಗುತ॥

 

ವೇದ ಪರಂಪರೆ ಭಾರತ

ಗಾನ ಕೋಗಿಲೆ ಹಾಡುತ

ಗುರು ಸಂಸ್ಕೃತಿ ಬೆಳೆಸುತ

ಎದ್ದು ನಿಂತಿದೆ ನಲಿಯುತ॥

 

ಕಲೆಗಳ ಗೂಡಿದು ಭಾರತ

ವಿಶ್ವಕೆ ದಾರಿಯ ತೋರುತ

ಮಹೋನ್ನತ ಪುತ್ರರ ನೀಡುತ

ಮಿನುಗುತಿಹುದಲ್ಲ ಹೊಳೆಯುತ॥

 

ವೈಶಿಷ್ಠ್ಯಮಯ ನಮ್ಮ ಭಾರತ

ಇದು ವಿಶ್ವಗಾನವನು ಪಾಡುತ

ಮಾನವರೆಲ್ಲ ಒಂದೇ ಎನ್ನುತಾ

ಶಾಂತಿ ಸಂದೇಶವನು ಸಾರುತಾ॥

-ಕೆ ನಟರಾಜ್, ಬೆಂಗಳೂರು

ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು

ಚಿತ್ರ್