ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ಜೊತೆಯಲಿ

ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ಜೊತೆಯಲಿ

ಕವನ

 ನೆನೆದಿರುವೆ ಪ್ರತೀದಿನವು

ಜೊತೆಯಲ್ಲಿಲ್ಲದವಳ,

ನೆನೆದು ನೆನೆದು

 ಕರಗದ ಕಲ್ಲಾದೆ 

ಮಳೆಯಲಿ ಅವಳ ನೆನಪಲಿ

 

ನಾನಿಷ್ಟು ನೆನೆಯಲು

 ನಿನ್ನ ಕಣ್ಣೆ ಕಾರಣ

ತುಟಿಗಳೆ ಪ್ರೆರಣ

ಕಣ್ಗಳೆರಡು ಕಂಡು

ನೆನೆಯುವಂತೆ ಮಾಡಿತು

ತುಟಿಗಳೆರಡು ಬಂದು

ಚಳಿಯನ್ನೆ ಓಡಿಸಿತು

ಎಷ್ತು ನೆನೆದರು ಚಳಿಯಿಲ್ಲಾ

ತುಟಿಗಳೇಕೊ ಬಿಡುತ್ತಿಲ್ಲಾ

ಜೊತೆಯಲ್ಲಿಲ್ಲದವಳ ನೆನೆದು

ನೆನೆದುಹೊದೆ ಮಳೆಯಲಿ

ಅವಳ ನೆನಪಲಿ,

 

ತುಂತುರು ಅನಿಗಳು

ನೆನೆಯಲೂ ಬಿಡುತ್ತಿಲ್ಲಾ

ಚಳಿಯನ್ನೂ ತರುತ್ತಿಲ್ಲಾ

ಕಣ್ಗಳೂ ಕಾಣುತ್ತಿಲ್ಲಾ

ತುಟಿಗಳೂ ಸಿಗುತ್ತಿಲ್ಲಾ,

ಮಳೆಗಾಗಿ ಕಾದಿರುವೆ

ಜೊತೆಯಲ್ಲಿಲ್ಲದವಳ ನೆನೆದು.

 

ನೀವು ಓಮ್ಮೆ 

ನೆನೆದು ನೋಡಿ

     ಮಳೆಯಲಿ ನಿಮ್ಮವರು ಜೊತೆಯಲಿ

          ಜೊತೆಗಿದ್ದರೆ

             ಚಳಿಯು ಕಾಣದು 

                ಮಳೆನಿಂತ ಪರಿವೇ ಇರದು.

 

Comments