ಜೊತೆಯಾಗಿ…

ಜೊತೆಯಾಗಿ…

ಕವನ

ಜೊತೆಯಾಗಿ ಸಾಗಿದೆನಿಂದು

ಸವಿಯಾಗಿ ಬಳಸುತಲಿಂದು

ಮನದೊಳಗೆ ಸೇರುತಲಿಂದು

ಬೆಸುಗೆಯೊಳು ಕಳೆಯುತಲಿಂದು

 

ನನ್ನ ಸವಿಯು ಬಲ್ಲೆಯೇನು ನೀನೆಯೆಂದು

ನನ್ನ ಮನದ ಬಯಕೆಯೆಲ್ಲ ಒಲವುಯೆಂದು

 

ಬಾನಿನಲ್ಲಿ ಹಾರುತಲಿಂದು

ಕೈಯ ಹಿಡಿದು ಸಾಗುತಲಿಂದು

ಒಂದಾಗಿ ಬಾಳುತಲಿಂದು

ಮನದುಂಬಿ ಹಾಡುತಲಿಂದು

 

ಸಂತೋಷ ಹೊಂದೋಣ ನಾವುಯೆಂದು

ಸಂಸಾರ ನಡಸೋಣ ಹೀಗೆಯೆಂದು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

 

ಚಿತ್ರ್