ಜೊನ್ನ

ಜೊನ್ನ

ಕವನ

ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ

ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ|

ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ

ತನ್ನೊಡಲ ಕನಸಿನ ಮಧುರತೆಯಲಿ||

 

ಬಾನಗಲದ ತುಂಬ ತಾರೆಗಳಂದಕೆ

ತಾನನದಲಿ ಕೇಳಿ ಬರುವ ರಾಗ

ಜೇನಿನಂತೆ ಸೊಗಸು ಜೇಯದಿ ಬೀಗುತ

ಗಾನದಲ್ಲಿ ತೇಲಿ ಬಂದ ಚಾಗ||

 

ಧರೆಯ ತುಂಬ ಜೊನ್ನ ಚೆಲ್ಲುತ ಬೆರುಗಲಿ

ಮರೆಯ ಮಾಡಿ ಚಾಂಪೆಯಿಕವು ನೋಡಿ

ಸರಿಕತನದಿ ಸವಿಯ ನೋಟವ ಬೀರುತ

ಸರಿಸಿಜಾತವು ನಗುತಿರುವ ಮೋಡಿ||

 

ಮೇದಿನಿಯಲಿ ಹಾಲ್ಬೆಳಕ ರಂಗು ಚೆಲ್ಲುವ

ಪಾದಪದ್ಮ ಚೆಲುವಿನೋತ್ಸವವದು|

ವಾದನದಲು ಮೇಲೂ ವಾಚಾಮಗೋಚರ

ಮಾಧವಿಯಲಿ ಶಶಿಯ ರೋಚನವಿದು||

 

ಅಂಬರದಲಿ ಚುಕ್ಕಿ ಚಿತ್ತಾರ ವಿಸ್ಮಯ

ಬಿಂಬ ಭುವಿಯಲ್ಲಿ ಕಂಡ ಬೆರಗು

ಚುಂಬನದಲಿ ತಾರಾ ಪುಂಜವು ಸುಂದರ

ನಂಬಿಕೆಯಲಿ ತಥ್ಯ ಪಥದ ಸೊಬಗು||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್