ಜೋಕ್: ತಮ್ಮನ್ನು ತಾವೇ ಹೊಡೆದುಕೊಳ್ಳುವವರು ಯಾರು?

ಜೋಕ್: ತಮ್ಮನ್ನು ತಾವೇ ಹೊಡೆದುಕೊಳ್ಳುವವರು ಯಾರು?

ಹಾಸ್ಯಗಾರರೊಬ್ಬರು ಸ್ಟೇಜ್ ಮೇಲೆ ನಿಂತುಕೊಂಡು ಕೇಳಿದರು.
ಹಾಸ್ಯಗಾರರು: ನಿಮಗೆ ನೀವೇ ಯಾರಾದರೂ ಹೊಡೆದುಕೊಂಡಿದ್ದೀರಾ?
ಸಭಿಕರು: ಇಲ್ಲಾ, ಇಲ್ಲಾ.
ಹಾಸ್ಯಗಾರರು: ಏಕೆ?
ಸಭಿಕರು: ಏಕೆಂದರೆ ಹಾಗೆ ಹೊಡೆದುಕೊಳ್ಳುವವರು ಹುಚ್ಚರು. ನಮ್ಮನ್ನು ಹುಚ್ಚರೆಂದುಕೊಂಡಿದ್ದೀರಾ?
ಹಾಸ್ಯಗಾರರು: ನಾನಂತೂ ತುಂಬಾ ಬಾರಿ ನನ್ನನ್ನು ನಾನು ಹೊಡೆದುಕೊಂಡಿದ್ದೀನಿ.
ಸಭಿಕರು: ಹಾಗಾದರೆ ನೀವು ನಿಮ್ ಹ್ಯಾನ್ಸ್ ಗೆ ಹೋಗಿ ಟ್ರೀಟ್ ಮೆಂಟ್ ತೊಗೊಳ್ಳಿ.
ಹಾಸ್ಯಗಾರರು: ಅದರ ಅವಶ್ಯಕತೆ ಇಲ್ಲ.ನಾನು ನಿಮಗೆ ಹುಚ್ಚನಾಗಿ ಕಾಣುತ್ತೀನಾ?
ಸಭಿಕರು: ಮತ್ತೇಕೆ ನಿಮ್ಮನ್ನು ನೀವು ಹೊಡೆದುಕೊಳ್ಳುತ್ತೀರಿ?
ಹಾಸ್ಯಗಾರರು: ಸೊಳ್ಳೆ ಕಚ್ಚಿದಾಗ.
ಸಭಿಕರು ಗೊಳ್ಳೆಂದು ನಕ್ಕರು.
*************************************************************************************