ಜ್ಞಾನ ನೀಡು ಜ್ಞಾನದಾತೆ

ಜ್ಞಾನ ನೀಡು ಜ್ಞಾನದಾತೆ

ಕವನ

ಅಮ್ಮ ಶಾರದೆ ಹಂಸವಾಹಿನಿ

ಬೊಮ್ಮನರಸಿಯೆ ಜ್ಞಾನದಾತೆಯೆ

ನಮ್ಮ ಬದುಕಿಗೆ ಜ್ಞಾನದಮೃತ ನೀಡು ನೀ ಹರಸಿ

ಗುಮ್ಮನಂತೆಯೆ ಮೂಢತನವಿದು

ಸುಮ್ಮ ಸುಮ್ಮನೆ ಮನವ ಕವಿದುದು

ಹೊಮ್ಮಿಸೆನ್ನಲಿ ಜ್ಞಾನ ಬೆಳಕನು ತಾಯೆ ಕನಿಕರಿಸಿ||

 

ಅರಿಯೆ ರಚಿಸಲು ಚಂದ ಕಾವ್ಯವ

ಮರೆತೆ ಗಣಗಳ ಮಾತ್ರೆ ಲೆಕ್ಕವ

ಬರೆಯಹೊರಟರೆ ಪಚನವಾಗದ ಕಬ್ಬಿಣದ ಕಡಲೆ

ಅರಿವು ಮೂಡಿಸು ರಚಿಸೆ ಕವನವ

ಬರೆಸು ನನ್ನಲಿ ಸೊಗಸು ರಚನೆಯ

ಕರವ ಜೋಡಿಸಿ ಬೇಡುತಿರುವೆನು ಮೆರೆಸು ಕರುಣೆಯಲೆ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್