ಜ್ಞಾನ ಭಿಕ್ಷಾ ಪಾದಯಾತ್ರೆಯ ಕುರಿತು…
ಪ್ರಿಯ ಓದುಗರೇ, ಬೆಂಗಳೂರಿನ ಶ್ರೀಯುತ ವಿವೇಕಾನಂದ ಹೆಚ್. ಕೆ. ಅವರ ಪ್ರಖರವಾದ ಮಾಹಿತಿಪೂರ್ಣ ಲೇಖನಗಳನ್ನು ನೀವು ಈಗಾಗಲೇ ಸಂಪದದ ಪುಟಗಳಲ್ಲಿ ಓದಿರುತ್ತೀರಿ. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿಯನ್ನು ‘ಜ್ಞಾನ ಭಿಕ್ಷಾ’ ಪಾದಯಾತ್ರೆಯ ಅಭಿಯಾನದ ಮೂಲಕ ಇವರು ಪ್ರಾರಂಭಿಸಿ ಈಗಾಗಲೇ 88 ದಿನಗಳೇ ಕಳೆದಿವೆ. ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪಾದಯಾತ್ರೆಯು ಮುಂದುವರಿಯುತ್ತಿದೆ. ಆಸಕ್ತರು ಅವರ ಜೊತೆ ಹೆಜ್ಜೆ ಹಾಕಬಹುದಾಗಿದೆ. ಅವರ ಪಾದಯಾತ್ರೆಯ ಬಗ್ಗೆ ಹಾಗೂ ಇಲ್ಲಿವರೆಗಿನ ಚಟುವಟಿಕೆಗಳ ಬಗ್ಗೆ ಅವರ ಮಾತಿನಲ್ಲೇ ಕೇಳೋಣ
----.
ಸುಮಾರು 88 ದಿನಗಳು,
2300ಕ್ಕೂ ಅಧಿಕ ಕಿಲೋಮೀಟರ್ ಗಳು,
185ಕ್ಕೂ ಅಧಿಕ ಸಂವಾದ ಕಾರ್ಯಕ್ರಮಗಳು,
ಜ್ಞಾನ ಭಿಕ್ಷಾ ಪಾದಯಾತ್ರೆಯ ಇಲ್ಲಿಯವರೆಗಿನ ಚಟುವಟಿಕೆ...
ಒಳ್ಳೆಯತನದ ಪ್ರಾಮಾಣಿಕತೆ ಮತ್ತು ಆತ್ಮಸಾಕ್ಷಿಯ ಮನಸ್ಸುಗಳ ಅಂತರಂಗದ ಅಲೆ ಎಬ್ಬಿಸಲು ಒಂದು ಕಾಲ್ನಡಿಗೆಯ ಚಳವಳಿ..
ಸಂಕುಚಿತ ಯೋಚನಾ ಶೈಲಿಯನ್ನು ಬದಲಿಸಿ ಸಮಗ್ರ ಚಿಂತನೆ ಪ್ರೇರೇಪಿಸುವ ಒಂದು ಪ್ರಯತ್ನ. ನಿಜ ಮನುಷ್ಯರನ್ನು ಹುಡುಕುತ್ತಾ, ನಾಗರಿಕ ಸಮಾಜದಲ್ಲಿ ಮಾನವಿಯ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಒಂದು ಹೋರಾಟ.
ಯಾರಿಂದಲೂ ಹಣ ಪಡೆಯದೆ, ಹಣ ಖರ್ಚು ಮಾಡದೆ ಕೇವಲ ಗೆಳೆಯರ ಆತಿಥ್ಯದೊಂದಿಗೆ ಈ ಒಂದು ಯಾತ್ರೆ ಸಾಗುತ್ತಿದೆ. ಪ್ರತಿ ಹೆಜ್ಜೆಯಲ್ಲೂ ಜ್ಞಾನವನ್ನು ಪಡೆಯುತ್ತಾ, ಪ್ರಕೃತಿಯೊಂದಿಗೆ ಮೌನವಾಗಿ ಸಂಭಾಷಿಸುತ್ತಾ, ಜನಗಳ ಹೃದಯಕ್ಕೆ ಲಗ್ಗೆ ಇಡುವ ಒಂದು ಪ್ರಯತ್ನ.....
ಬರಹದ ಮೂಲಕ ಆರಂಭವಾದ ಮನಸ್ಸುಗಳ ಅಂತರಂಗದ ಚಳವಳಿ, ಕಾಲ್ನಡಿಗೆಯ ಮೂಲಕ ಮತ್ತೊಂದು ಹೆಜ್ಜೆ ಇಡುತ್ತಿದೆ. ಜನರಲ್ಲಿ ಬದಲಾವಣೆಯ ಬಗ್ಗೆ ಒಂದು ಚರ್ಚೆ ಹುಟ್ಟು ಹಾಕಲು ಮತ್ತು ಆತ್ಮ ಶುದ್ಧತೆಯ ಬೀಜ ಬಿತ್ತಲು ನಿರಂತರ ಶ್ರಮ ಪಡಲಾಗುತ್ತಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ದೃಢತೆ ಕಾಪಾಡಿಕೊಳ್ಳಲು ಎಚ್ಚರಿಕೆ ರೂಪದ ಮನವಿ ಮಾಡಿಕೊಳ್ಳುತ್ತಿದೆ.....
ಕಲ್ಮಶಗೊಳ್ಳುತ್ತಿರುವ ಗಾಳಿ ನೀರು ಆಹಾರದ ಜೊತೆಗೆ ಪ್ರಾಕೃತಿಕ ಸಂಪನ್ಮೂಲಗಳು ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ನಮ್ಮ ಎಲ್ಲಾ ರೀತಿಯ ಸಂಬಂಧಗಳ ಸುಧಾರಣೆಯ ಮಹತ್ವವನ್ನು ಸಾರುತ್ತಿದೆ. ಅನೇಕ ಪರಿಚಿತರ ನಡುವೆ ಅಂತರಂಗದ ಚಳವಳಿ ಬೆಸೆಯುತ್ತಿದೆ. ಸಾಗಬೇಕಾದ ದಾರಿ ಇನ್ನೂ ದೂರ ಬಹುದೂರ ಎಂಬ ಅರಿವಿನೊಂದಿಗೆ.
ಇಲ್ಲಿಯವರೆಗಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆಯ ಒಂದು ಪಕ್ಷಿನೋಟ..
ವನಮಾರ್ಪಳ್ಳಿ - ಔರಾದ್,
ಔರಾದ್ - ಕಮಲನಗರ,
ಕಮಲನಗರ - ಬಾಲ್ಕಿ,
ಬಾಲ್ಕಿ - ಹುಲಸೂರು,
ಹುಲುಸೂರು - ಬಸವಕಲ್ಯಾಣ,
ಬಸವಕಲ್ಯಾಣ - ಹುಮ್ನಾಬಾದ್,
ಹುಮ್ನಾಬಾದ್ - ಚಿಟಗುಪ್ಪ,
ಚಿಟಗುಪ್ಪ - ಹಳ್ಳಿಖೇಡ್ ಬಿ,
ಹಳ್ಳಿಖೇಡ್ - ಬಸವಗಿರಿ ( ಬೀದರ್ )
ಬೀದರ್ - ವಿಠ್ಠಲ ಪುರ,
ವಿಠ್ಠಲ ಪುರ - ಚಿಂಚೋಳಿ,
ಚಿಂಚೋಳಿ - ಕಾಳಗಿ,
ಕಾಳಗಿ - ಕಮಲಾಪುರ,
ಕಮಲಾಪುರ - ಕಲಬುರಗಿ,
ಕಲಬುರಗಿ - ಕಡಗಂಚಿ,( ಕೇಂದ್ರೀಯ ವಿಶ್ವವಿದ್ಯಾಲಯ)
ಕಡಗಂಚಿ - ಆಳಂದ,
ಆಳಂದ - ನಿಂಬರ್ಗಾ,
ನಿಂಬರ್ಗಾ - ಅಫಜಲಪುರ,
ಅಫಜಲಪುರ - ಕೋಳೂರು,ಗುಡ್ಡೇವಾಡಿ, ಗುಡ್ಡೇವಾಡಿ - ಯಡ್ರಾಮಿ,
ಯಡ್ರಾಮಿ - ಸೊನ್ನ,
ಸೊನ್ನ - ಜೇವರ್ಗಿ,
ಜೇವರ್ಗಿ - ವಾಡಿ,
ವಾಡಿ - ಚಿತ್ತಾಪೂರ,
ಚಿತ್ತಾಪೂರ - ಸೇಡಂ,
ಸೇಡಂ - ಗುರುಮಿಠಕಲ್,
ಗುರುಮಿಠಕಲ್ - ಯಾದಗಿರಿ,
ಯಾದಗಿರಿ - ಶಹಾಪುರ,
ಶಹಾಪುರ - ಸುರಪುರ - ದೇವರ ಗೋನಾಳ್,
ದೇವರ ಗೋನಾಳ - ಕೆಂಭಾವಿ,
ಕೆಂಭಾವಿ - ಹುಣಸಗಿ,
ಹುಣಸಗಿ - ಜಾಲಹಳ್ಳಿ,
ಜಾಲಹಳ್ಳಿ - ದೇವದುರ್ಗ,
ದೇವದುರ್ಗ - ಗಬ್ಬೂರು,
ಗಬ್ಬೂರು - ರಾಯಚೂರು ನಗರ,
ರಾಯಚೂರು - ಸಿರಿವಾರ,
ಸಿರಿವಾರ - ಮಾನ್ವಿ,
ಮಾನ್ವಿ - ಸಿಂಧನೂರು,
ಸಿಂಧನೂರು - ಮಸ್ಕಿ,
ಮಸ್ಕಿ - ವಟಗಲ್,
ವಟಗಲ್ - ಹಟ್ಟಿ,
ಹಟ್ಟಿ - ಲಿಂಗಸಗೂರು,
ಲಿಂಗಸಗೂರು - ನಾಲತವಾಡ,
ನಾಲತವಾಡ - ಮುದ್ದೇಬಿಹಾಳ,
ಮುದ್ದೇಬಿಹಾಳ - ತಾಳಿಕೋಟೆ,
ತಾಳಿಕೋಟೆ - ಮಿಣಜಗಿ,
ಮಿಣಜಗಿ - ಬ್ಯಾಕೋಡ,
ಬ್ಯಾಕೋಡ - ಬಸವನ ಬಾಗೇವಾಡಿ ( ಇಂಗಳೇಶ್ವರ )
ಇಂಗಳೇಶ್ವರ - ದೇವರ ಹಿಪ್ಪರಗಿ,
ದೇವರ ಹಿಪ್ಪರಗಿ - ಸಿಂದಗಿ, ಸಿಂದಗಿ - ಆಲಮೇಲ,
ಅಲಮೇಲ - ಇಂಡಿ,
ಇಂಡಿ - ಚಡಚಣ,
ಚಡಚಣ - ಅರಕೇರಿ,
ಅರಕೇರಿ - ವಿಜಯಪುರ,
ವಿಜಯಪುರ - ತಿಕೋಟಾ,
ತಿಕೋಟಾ - ಬಬಲೇಶ್ವರ,
ಬಬಲೇಶ್ವರ - ಕೊಲ್ಹಾರ,
ಕೊಲ್ಹಾರ - ಮುತ್ತಗಿ,
ಮುತ್ತಗಿ - ಯರನಾಳ,
ಯರನಾಳ - ನಿಡಗುಂದಿ,
ನಿಡಗುಂದಿ - ಆಲಮಟ್ಟಿ,
ಆಲಮಟ್ಟಿ - ಕೂಡಲ ಸಂಗಮ,
ಕೂಡಲ ಸಂಗಮ - ಹುನಗುಂದ - ಇಳಕಲ್.
ಬಾಗಲಕೋಟೆ- ಗುಳೇದಗುಡ್ಡ
ಆಲಮಟ್ಟಿ - ಬೀಳಗಿ
ಬೀಳಗಿ- ಮುಧೋಳ
ಮುಧೋಳ -ಜಮಖಂಡಿ, ಬನಹಟ್ಟಿ, ರಬಕವಿ
ಮಹಾಲಿಂಗಪುರ-ತೇರದಾಳ
ತೇರದಾಳ -ಅಥಣಿ
ಅಥಣಿ -ಕಾಗವಾಡ......
ಹೀಗೇ ಮುಂದುವರೆಯುತ್ತಿದೆ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರದಲ್ಲಿ ಭಾವೈಕ್ಯತೆಯ ಹರಿಕಾರ ‘ಪದ್ಮಶ್ರೀ’ ಪುರಸ್ಕೃತ ಶ್ರೀ ಇಬ್ರಾಹಿಂ ಸುತಾರ್ ಅವರಿಂದ ವಿವೇಕಾನಂದ ಹೆಚ್. ಕೆ. ಅವರಿಗೆ ಗೌರವಾರ್ಪಣೆ