ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು?

ಜ್ಯೋತಿಷ್ಯ - ಎಷ್ಟರ ಮಟ್ಟಿಗೆ ನಂಬಬಹುದು?

Comments

ಬರಹ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲರೂ ಸಮಾನರು. ಎಲ್ಲರ ಜಾತಕಗಳಲ್ಲೂ (ಹುಟ್ಟಿದ ಸಮಯದಲ್ಲಿಯ ಗ್ರಹಗಳ ಸ್ಥಾನ ಮತ್ತು ಅವುಗಳ ಚಲನೆಯ ಬಗೆಗಿನ ಲೇಖನ) ೩೩೭ ಅಂಕಗಳು ಇರುತ್ತವೆ. ಇದನ್ನು ಮುಖ್ಯವಾಗಿ ೧೨ ವಿಷಯಗಳಾಗಿ ವಿಂಗಡಿಸಿದ್ದಾರೆ - ಆರೊಗ್ಯ, ಸಾಂಸಾರಿಕ ಜೀವನ, ಐಶ್ವರ್ಯ, ಸಾಮಾಜಿಕ ಸ್ಥಾನಮಾನ, ತಿಳುವಳಿಕೆ, ಆಯಸ್ಸು ಇತ್ಯಾದಿ. ಸರಿ ಸಮಾನವಾಗಿ ಒಂದೊಂದು ವಿಷಯ ಅಥವಾ ಮನೆಗಳಿಗೆ ೨೮ ಅಂಕಗಳು ಬರುವುವು. ೩೩೭ / ೧೨. ಯಾವುದಾದರೂ ಒಂದು ವಿಷಯದಲ್ಲಿ ಅಂಕಗಳು ಜಾಸ್ತಿ ಇದ್ರೆ ಇನ್ನೊಂದರಲ್ಲಿ ಅದು ಕಡಿಮೆ ಇರತ್ತೆ ಉದಾಹರಣೆಗೆ ಶಂಕರಾಚಾರ್ಯರ ಜಾತಕದಲ್ಲಿ ಸಾಮಾಜಿಕ ಮನ್ನಣೆ, ಜ್ಞಾನ, ಇತ್ಯಾದಿಗಳು ಹೆಚ್ಚಿನದಾಗಿ ಇದ್ದುವು, ಆದರೆ ಆಯಸ್ಸು ಮಾತ್ರ ಬಹಳ ಕಡಿಮೆ ಇತ್ತು. ಅದೇ ಸರ್ ಎಮ್ ವಿ ಅವರಿಗೆ ಸಾಮಾಜಿಕ ಸ್ಥಾನಮಾನ, ಐಶ್ವರ್ಯ, ಬುದ್ಧಿವಂತಿಕೆ ಎಲ್ಲವೂ ಇತ್ತು, ಆದರೆ ಸಾಮ್ಸಾರಿಕ ಜೀವನದಲ್ಲಿ ಬಹಳ ಪೆಟ್ಟು ತಿಂದರು. ನಾನು ಈ ವಿಷಯ ತಿಳಿದಾಗಿನಿಂದ (೧೯೮೭) ಪ್ರತಿಯೊಬ್ಬರ ಬಗ್ಗೇನೂ ಕೂಲಂಕುಷವಾಗಿ ಪರೀಕ್ಷಿಸುತಿದ್ದೀನಿ - ಇದೊಂದು ೧೦೦% ವೈಜ್ಞಾನಿಕ ವಿಷಯ. ನಿಸರ್ಗವೇ ಎಲ್ಲವನ್ನೂ ಸಮತೋಲನದಲ್ಲಿಡುತ್ತದೆ. ಭಿಕ್ಷುಕನಿಗೆ ಇರಲು ಮನೆ ಇಲ್ಲ ಆದರೆ ಅವನಿಗೆ ಸಿಗೋ ನೆಮ್ಮದಿಯ ನಿದ್ರೆ ಅದೇ ಮಹಲಿನಲ್ಲಿರುವವನಿಗೆ ಸಿಗೋದಿಲ್ಲ. ಜೀವನ ಒಂದು ಚಕ್ರದಂತೆ. ಇಂದು ಮೇಲಿದ್ದವನು ಒಮ್ಮೆ ಕೆಳಗಿಳಿಯಲೇ ಬೇಕು. ಹಾಗೇ ಕೆಳಗಿರುವವನು ಒಮ್ಮೆ ಮೇಲೇರುವವನು. ನಿವೂ ಎಷ್ಟೇ ಪ್ರಸಿದ್ಧರಾದರೂ ಕೆಲವೊಮ್ಮೆ ಎಲ್ಲರೂ ನಿಮ್ಮನ್ನು ಕಡೆಗಣಿಸೋ ಪರಿಸ್ತಿಥಿ ಬರತ್ತೆ - ಆಗ ಆತ್ಮ ಹತ್ಯೆ ಮಾಡಿಕೊಳ್ಳುವಷ್ಟು ಬೇಸರವಾಗತ್ತೆ. ಅದನ್ನೇ ಕೆಲವರು ಶನಿಕಾಟ ಅಂತಲೂ ಕರೆಯುತ್ತಾರೆ. ಅದೇ ಕೆಲವು ವೇಳೆ ಏನೂ ಇಲ್ಲದವರು ರಾಜಭೋಗ ಅನುಭವಿಸುವರು. ಅದನ್ನು ಶುಕ್ರದೆಶೆ ಅನ್ನುತ್ತಾರೆ. ಹೇಳ್ತಾ ಹೋದ್ರೆ ಇದು ಹನುಮನ ಬಾಲದ ತರಹ ಹೋಗ್ತಾ ಇರತ್ತೆ. ಕನ್ನಡದಲ್ಲಿ ಒಂದು ಉಪಯುಕ್ತವಾದು ಮಾತು ಹೇಳ್ತಾರೆ ಆರಕ್ಕೆ ಏರ್ಬೇಡ ಮೂರಕ್ಕೆ ಇಳೀಬೇಡ ಅಂತ ಇದೆಷ್ಟು ಸತ್ಯ ಅಲ್ಲವೇ? ನಿಮ್ಮಗಳ ಅನಿಸಿಕೆ ಏನು ತಿಳಿಸಿ. ಗೊಡ್ಡು ಅಂತ ಬೇಕಾದ್ರು ಅನ್ನಿ. ಅನುಭವವಿಲ್ಲದಿದ್ದರೆ ಆಗ ಹಾಗೆನಿಸುವುದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet