ಜ್ಯೋತಿ ಬಸು ಇನ್ನಿಲ್ಲ

ಜ್ಯೋತಿ ಬಸು ಇನ್ನಿಲ್ಲ

ಬರಹ
 
ಕಳೆದ ಹದಿನೇಳು ದಿನಗಳಿಂದ ಸಾವಿನ ಜೊತೆ ಹೋರಾಟ ನಡೆಸಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೊತಿ ಬಸು ಇಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
 

 

ಕೊಲ್ಕತ್ತ: ಜ್ಯೋತಿ ಬಸು ಅವರ ನಿಧನದ ಸುದ್ದಿಯನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಪ್ರಕಟಿಸಿದರು.

ಈ ವರ್ಷದ ಮೊದಲ ದಿನದಂದೇ ಜ್ಯೋತಿ ಬಸು ಅವರನ್ನು ತೀವ್ರ ನ್ಯೂಮೋನಿಯಾ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಲ್ಟ್ ಲೇಕ್ ಪ್ರದೇಶದಲ್ಲಿರುವ ಎಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 48ಗಳ ಅವಧಿಯೂ ಕೃತಕ ಉಸಿರಾಟ ವ್ಯವಸ್ಥೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದ ಜ್ಯೋತಿ ಬಸು ಅವರ ಮೂತ್ರ ಪಿಂಡ, ಮೆದುಳು, ಪಿತ್ತಕೋಶ, ಶ್ವಾಸಕೋಶ ಮತ್ತು ಹೃದಯಗಳೆಲ್ಲವುಗಳ ಕ್ಷಮತೆಯೂ ಕ್ಷಣ ಕ್ಷಣಕ್ಕೂ ಕುಸಿಯುತ್ತಿತ್ತು.

ಜ್ಯೋತಿ ಬಸು ಅವರ ಹೃದಯ ಬಡಿತ 50ಕ್ಕಿಂತಲೂ ಕಡಿಮೆಯಾದಾಗ ತಾತ್ಕಾಲಿಕ ಪೇಸ್ ಮೇಕರ್ ಅಳವಡಿಸಲಾಗಿತ್ತು. ಮೂತ್ರ ಪಿಂಡ ವೈಫಲ್ಯದ ಹಿನ್ನೆಲೆಯಲ್ಲಿ ಡಯಾಲಿಸಿಸ್ ನಡೆಸಲಾಗಿತ್ತು. ಗುರುವಾರದಂದು ಬಸು ಅವರ ಆರೋಗ್ಯ ಸ್ಥಿರವಾಗಿದ್ದಂತೆ ಕಂಡರೂ ಶುಕ್ರವಾರದಿಂದ ಅದು ಮತ್ತೆ ಬಿಗಡಾಯಿಸಿತ್ತು.

ಕಳೆದ ವರ್ಷ ಜುಲೈನಲ್ಲಿಯೂ ಜಠರದ ತೊಂದರೆ ಮತ್ತು ಉಸಿರಾಟದ ತೊಂದರೆಗಳ ಹಿನ್ನೆಲೆಯಲ್ಲಿ ಜ್ಯೋತಿ ಬಸು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

-


ಪ್ರಜಾವಾಣಿ