ಜ್ಯೋತಿ ಸ್ವರೂಪ
ಕವನ
ಶರಣು ಹರಿಹರ ತನಯಾ
ಮಣಿಕಂಠ ಜ್ಯೋತಿ ಸ್ವರೂಪ
ಕಲಿಯುಗ ವರದಾ ದಯೆ ತೋರೋ
ಅಯ್ಯಪ್ಪ ಕಾಯೊ ತಂದೆ
ನಾ ನಿನ್ನ ನೋಡಲೆಂದೆ
ಇರುಮುಡಿಯ ಹೊತ್ತು ಬಂದೆ
ಬೇಡಿ ದರ್ಶನ ||ಅಯ್ಯಪ್ಪ||
ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ
ಅನ್ನದಾನ ಪ್ರಭುವೆ ನಿನ್ನ ನಿತ್ಯ ನೆನೆಯುವೆ
ನಿನ್ನ ಒಲುಮೆ ದೊರೆತರಾಗ ಬಾಳು ಸಾರ್ಥಕ
ಬಾಳ ನಡತೆ ಶುದ್ಧವಿರಿಸೆ ನೀನು ಪ್ರೇರಕ
ಕಪ್ಪು ಉಡುಗೆ ತೊಟ್ಟು ಕಠಿಣ ವ್ರತವ ಮಾಡಿದೇ
ನಿನ್ನ ಚರಣ ಸೇವೆ ಗೈವ ಆಸೆಯೊಂದಿಗೆ
ಹಗಲು ಇರುಳು ನಿನ್ನ ನಾಮ ಮನದೆ ಪಠಿಸಿದೆ
ಭಕ್ತ ಬಂಧು ದೇವ ನೀನು ಒಲಿಯಬಾರದೇ
ಪಂಪ ನದಿಯ ತೀರ್ಥದಲ್ಲಿ ಶುದ್ಧನಾದೆನು
ಶಬರಿ ಗಿರಿಯ ಮೇಲೆ ನಾನು ಏರಿ ಬಂದೆನು
ಮಕರ ಜ್ಯೋತಿ ಕಂಡು ನಾನು ಪುಳಕಗೊಂಡೆನು
ಕರುಣದಿಂದ ಕಾವುದೆಮ್ಮ ನಿತ್ಯ ಮಣಿವೆನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್