ಝಣ್-ಝಣ ಹಣ, ಇವೇ ಏನು ನಿನ್ನ ಗುಣ-ಅವಗುಣ.

ಝಣ್-ಝಣ ಹಣ, ಇವೇ ಏನು ನಿನ್ನ ಗುಣ-ಅವಗುಣ.

ಕವನ

ಹಣದಿಂದಲೇ ಜಗತ್ತು ಎನ್ನುವರೆಲ್ಲ

ಹಣದ್ ಹಿಂದೆ ಜನರೇಕೆ ಬೀಳುವರಲ್ಲ.

 

ಹಣವಿದ್ದರೆ ಬಂಧು ಬಳಗಗಳೆಲ್ಲ

ಹಣವಿಲ್ಲದಿದ್ದರೆ ಸಂಬಂಧಗಳೆ ಇಲ್ಲ

ಹಣದ ಎದುರು ಭಾವನೆಗೆ ಅರ್ಥ ಇಲ್ಲ

ಹಣಕೆಂದು ಗುಣ ನೀತಿ ಮರೆತಿಹರಲ್ಲ.

 

ಹಣದಿಂದಲೆ ಸಕಲ ಹರುಷಗಳಂತೆ

ಹಣದಿಂದಲೇ ಸಕಲ ವಸ್ತುಗಳಂತೆ

ಹಣವಿಲ್ಲದಿದ್ದರೆ ಬೆಲೆಯಿಲ್ಲವಂತೆ

ಹಣವ ಕಂಡರೆ ಹೆಣವೂ ಬಾಯ್ಬಿಡುವುದಂತೆ.

 

ಹಣದಿಂದಲೆ ಊಟ ವಸ್ತ್ರಗಳಂತೆ

ಹಣದಿಂದಲೆ ವಾಹನ, ಭೂಮಿಗಳಂತೆ

ಮನೆಯ ಕಟ್ಟಲು ಹಣ ಬೇಕೇ ಬೇಕಂತೆ

ಹಣವಿಲ್ಲದಿದ್ದರೆ ಮದುವೆ ನಡೆಯದಂತೆ.

 

ಹಣದಿಂದಲೆ ಗುರು, ಮಠ, ಗುಡಿ ಸೇವಾಸಂಸ್ಥೆ

ಹಣಕಾಗಿಯೆ ವೈದ್ಯ, ಆಸ್ಪತ್ರೆ, ವಿದ್ಯಾಸಂಸ್ಥೆ

ಹಣದಿಂದ ನಡೆವುದು ಮತದಾನ, ಸರಕಾರ

ಹಣಕಾಗಿಯೆ ಕೆಲಸ ದುಡಿಮೆ ಭ್ರಸ್ಟಾಚಾರ.

 

ಹಣಕಾಗಿಯೆ ಆಗುವುದು ಎಲ್ಲಾ ಹಗರಣ

ಹಣದಿಂದಲೆ ನಡೆವುದು ಎಲ್ಲ ಪ್ರಕರಣ

ಹಣಕಾಗಿಯೆ ಮದುವೆ ಮತ್ತು ವಿಚ್ಛೇದನ

ಹಣಕಾಗಿಯೆ ವಿದ್ಯೆ, ವಿದೇಶ ಪ್ರಯಾಣ.

 

ಹಣಕಾಗಿಯೆ ಎಲ್ಲ ಕೊಲೆ ಕಾದಾಟ

ಹಣಕಾಗಿಯೆ ಎಲ್ಲ ಜಗಳ ಜಂಜಾಟ

ಹಣಕಾಗಿಯೆ ಎಲ್ಲ ಪಾಡು ಪರದಾಟ

ಅಬ್ಬಬ್ಬ ಹಣವೇ ಏನು ನಿನ್ನಾಟ.

 

ಹಣದಿಂದಲೇ ಜಗತ್ತು ಎನ್ನುವರೆಲ್ಲ

ಹಣದ್ ಹಿಂದೆ ಜನರೇಕೆ ಬೀಳುವರಲ್ಲ.

          (ಪುರಂದರ ದಾಸರ "ಮಣ್ಣಿಂದ ಕಾಯ ಮಣ್ಣಿಂದ" ಹಾಡಿನ ದಾಟಿ)

Comments