ಝೆನ್ ಕತೆ: ಯಾರಿಗೆ ಗೊತ್ತು?

ಝೆನ್ ಕತೆ: ಯಾರಿಗೆ ಗೊತ್ತು?

ಬರಹ

ಹೊಸ ವರ್ಷದ ಪಾರ್ಟಿಯಲ್ಲಿ ಮೂವರು ಮುದುಕರು ಕೂತು ಮಾತಾಡುತ್ತಿದ್ದರು. “ಇವತ್ತು ಪಾರ್ಟಿಗೆ ಬಂದಿರುವವರಲ್ಲಿ ಎಷ್ಟು ಜನ ಮುಂದಿನ ವರ್ಷದ ಪಾರ್ಟಿಗೆ ಯಾರಿರುತ್ತಾರೋ ಯಾರಿಲ್ಲವೋ, ಯಾರಿಗೆ ಗೊತ್ತು?” ಅವನ ಗೆಳೆಯ ಹೇಳಿದ, “ನೀನು ಮುಂದಿನ ವರ್ಷ ಅಂದದ್ದು ದೂರದ ಮಾತು. ಇವತ್ತು ರಾತ್ರಿ ನಾವು ಮನೆಗೆ ಹೋಗಿ ಶೂ ಬಿಚ್ಚಿ, ಸಾಕ್ಸು ತೆಗೆದಿಟ್ಟ ಮೇಲೆ ನಾಳೆ ಬೆಳಗ್ಗೆ ಅವನ್ನು ಹಾಕಿಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?” ಮೂರನೆಯಾತ ನುಡಿದ: “ಅಯ್ಯಾ ನೀನು ನಾಳೆ ಎಂದು ಬಲು ದೂರದ ಮಾತು ಹೇಳುತ್ತಿರುವೆ. ನಾವು ಬಿಟ್ಟ ಉಸಿರು ಗೊತ್ತು, ಬಿಟ್ಟ ಉಸಿರನ್ನು ಒಳಗೆ ಎಳೆದುಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?”
[ವ್ಯಾಸನ ಮಹಾಭಾರತದಲ್ಲಿ ಇಂಥದೇ ಮಾತು ಓದಿದ್ದ ನೆನೆಪು. “ದಿನ ದಿನವೂ ಲಕ್ಷಾಂತರ ಜೀವಿಗಳು ಯಮನ ಲೋಕಕ್ಕೆ ಸಾಗುತ್ತಿದ್ದರೂ ಪ್ರತಿಯೊಬ್ಬನೂ ತಾನು ಅನಂತಕಾಲ ಇರುವುದಾಗಿ ತಿಳಿದು ಬದುಕುತ್ತಾನಲ್ಲ ಅದೇ ದೊಡ್ಡ ಪವಾಡ.”]

ಝೆನ್ ಗೆಳೆಯರು