ಝೆನ್ ಕತೆ ೧೫. ಏನೇನೂ ಇಲ್ಲ!

ಝೆನ್ ಕತೆ ೧೫. ಏನೇನೂ ಇಲ್ಲ!

ಬರಹ
ಯಮಕೊಅ ತೆಶ್ಶು ಒಬ್ಬ ಕಿರಿಯ ವಿದ್ಯಾರ್ಥಿ. ಅನೇಕ ಗುರುಗಳನ್ನು ಭೇಟಿ ಮಾಡಿದ್ದ. ಒಮ್ಮೆ ಆತ ಶೊಕೊಕು ಊರಿನ ದುಕೌನ್ ನನ್ನು ಕಾಣಲೆಂದು ಹೋದ. ತನ್ನ ಜ್ಞಾನವನ್ನು ತೋರಿಸಿಕೊಳ್ಳಬೇಕು ಅನ್ನಿಸಿತು. “ಮನಸ್ಸು ಎಂಬುದಿಲ್ಲ, ಬುದ್ಧ ಎಂಬುದು ಇಲ್ಲ, ಸಚರ, ಅಚರ ಇವೆಲ್ಲವೂ ಇಲ್ಲವೇ ಇಲ್ಲ. ಸುಖವಿಲ್ಲ, ದುಃಖವಿಲ್ಲ, ಶೂನ್ಯವೊಂದೇ ಸತ್ಯ. ಸಾಕ್ಷಾತ್ಕಾರವೂ ಇಲ್ಲ. ಗುರುವೂ ಇಲ್ಲ, ಶಿಷ್ಯನೂ ಇಲ್ಲ. ಕೊಡುವುದೆಂಬುದಿಲ್ಲ, ಸ್ವೀಕರಿಸುವುದೆಂಬುದಿಲ್ಲ.” ಗುರು ದುಕೌನ್ ಹೊಗೆ ಬತ್ತಿ ಸೇದುತ್ತಿದ್ದ. ಕೊಂಚ ಹೊತ್ತು ಏನೂ ಮಾತನಾಡಲಿಲ್ಲ. ತಟ್ಟನೆದ್ದು ಅವನ ಕೆನ್ನೆಗೆ ಬಾರಿಸಿದ. ವಿದ್ಯಾರ್ಥಿಗೆ ಕೋಪ ಬಂದುಬಿಟ್ಟಿತು. “ಏನೇನೂ ಇಲ್ಲ ಅನ್ನುವುದಾದರೆ ಈ ಕೋಪ ಎಲ್ಲಿಂದ ಬಂತು?” ಗುರು ಕೇಳಿದ. [ನಮಗೆಲ್ಲ ಬಾಯಿ ಮಾತಿನ ವೇದಾಂತ ಗೊತ್ತು, ಅದು ಅನುಭವವಾಗಿ ಬಂದಿರುವುದಿಲ್ಲ, ಅಲ್ಲವೇ?]