ಝೆನ್ ಕತೆ: ೨೨: ಅಮೂಲ್ಯ

ಝೆನ್ ಕತೆ: ೨೨: ಅಮೂಲ್ಯ

ಬರಹ
ಚೀನಾದ ಝೆನ್ ಗುರು ಸೋಝನ್‌ನನ್ನು ಒಮ್ಮೆ ಶಿಷ್ಯನೊಬ್ಬ ಹೀಗೆ ಕೇಳಿದ: “ಗುರುವೇ, ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಯಾವುದು?” “ಸತ್ತು ಹೋದ ಬೆಕ್ಕಿನ ತಲೆ” ಎಂದು ಉತ್ತರಿಸಿದ ಗುರು. “ಸತ್ತು ಹೋದ ಬೆಕ್ಕಿನ ತಲೆ ಅದು ಹೇಗೆ ಅಮೂಲ್ಯವಾಗುತ್ತದೆ?” ಎಂದು ಕೇಳಿದ ಶಿಷ್ಯ. “ಅದರ ಬೆಲೆಯನ್ನು ಇಷ್ಟೇ ಎಂದು ಯಾರೂ ಹೇಳಲಾರರು, ಅದಕ್ಕೇ” ಎಂದ ಗುರು. [ಕುವೆಂಪು ಅವರು ಹೇಳಿದ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ಎಂಬ ಮಾತು ನೆನಪಿಗೆ ಬರುತ್ತಿದೆ. “ಬೆಲೆ” ಎಂಬುದು, ಮೌಲ್ಯ ಎಂಬುದು ನಮ್ಮ ನಮ್ಮ ಕಲ್ಪನೆಯೇ ಹೊರತು ನಿಜವಲ್ಲ, ಅಲ್ಲವೇ?]