ಟಂಕಾಗಳು

ಟಂಕಾಗಳು

ಕವನ

*ಹಸಿರು ಬೇಕು*

*ಬದುಕು ಬೆಳಗಲು*

*ಉಸಿರಿದ್ದರೆ*

*ಅವನಿ ಪರಿಪೂರ್ಣ*

*ಕಾನನ ಚಿಗುರಲಿ!*

**

*ಕಾನನವಿದು*

*ಭುವಿಯ ಆಭರಣ*

*ಪೋಷಿಸಿದರೆ*

*ಸಮೃದ್ಧ ಸಿರಿ ಸುಖ*

*ಸದಾ ಸುಮಂಗಲಿ!*

**

*ಹಸಿರಿರಲು*

*ತಂಪು ಇಳೆಯೊಡಲು*

*ನಾಶ ಮಾಡಲು*

*ಕನಸಿಗೇ ಸಿಡಿಲು*

*ರಕ್ಷಿಸಿ ತಾಯೊಡಲು!*

**

*ಹಸಿರುಳಿಸಿ*

*ಕಾನನ ಚಿಗುರಿಸಿ*

*ನಗುತಲಿರಿ*

*ಬೇಡ ಹೊಟ್ಟಯುರಿ*

*ಇರಲಿ ಬಿಡಿ ಸಿರಿ!*

**

*ಲೋಕ ನಗಲಿ*

*ಪರಿಸರ ಉಳಿಸಿ*

*ಹಗೆ ಸಲ್ಲದು*

*ಸಡಗರ ಇರಲಿ*

*ಮಳೆ ಬೆಳೆ ಬರಲಿ!*

**

*ಇರಲಿ ಮನ*

*ಪ್ರಕೃತಿ ರಕ್ಷಣೆಗೆ*

*ತೋರಿ ಗೌರವ*

*ನಮ್ಮ ಪರಿಸರಕ್ಕೆ*

*ನಮ್ಮ ಉಸಿರಾಟಕ್ಕೆ!*

**

*ಕಾನನ ನೋಡಿ*

*ಮಾಡಿದೆ ಮಹಾ ಮೋಡಿ*

*ಪ್ರಾಣಿ ಪಕ್ಷಿಗೆಲ್ಲ*

*ಇದುವೇ ಜೀವನಾಡಿ*

*ಎರಚದಿರಿ ರಾಡಿ!*

-ಕುಮಾರ ಚಲವಾದಿ ಶಿರಸಿ

 

ಚಿತ್ರ್