ಟಂಕಾ ರಚನೆ

ಟಂಕಾ ರಚನೆ

ಕವನ

1) *ಮಾನವೀಯತೆ*

ಎದೆ ದನಿಯು

ಕೂಗಿ ಸಾರಿ ಹೇಳಲು

ಮಾನವೀಯತೆ

ಧರೆ ಸಗ್ಗವಾದಂತೆ

ಎಂದನು ಪ್ರಭುಲಿಂಗ.

 

2) *ಅನ್ಯಾಯ*

ನ್ಯಾಯ ಮುಖವ

ಹಾಕಿ ಅನ್ಯಾಯ ಆಟ

ಈ ಕಲಿಯುಗ

ಎಡವಿ ಸಾಗುತಿದೆ

ನೀತಿ ಕೈಗೆಟುಕದು.

 

3) *ಸತ್ಯ*

ಉರಿವ ಜ್ಯೋತಿ

ಸತ್ಯದ ಸ್ವರೂಪವೇ

ಸುಡದಿರದು

ಕಟು ಸತ್ಯವನಾಡಿ

ಸಂಕಟಪಡದಿರು.

 

4) *ಸಂಸ್ಕೃತಿ*

ಬದುಕು ನೀನು

ಬದುಕಲು ನೀ ಬಿಡು 

ಅದೇ ಸಂಸ್ಕೃತಿ

ಮನುಜ ಧರ್ಮ ಕೀರ್ತಿ 

ಅರಿವಿರಲಿ ನೀತಿ.

 

5) *ಅಜ್ಞಾನ*

ಕಳೆ ಅಜ್ಞಾನ

ಬೆಳೆಸು ಸುಜ್ಞಾನವ

ವಿಜ್ಞಾನ ದೀಪ

ಜ್ಞಾನದ ನಿಜ ರೂಪ

ಬೆಳಗಲಿ ಮನವ.

-ನಿರಂಜನ ಕೇಶವ ನಾಯಕ, ಶಿಕ್ಷಕ, ವಿಟ್ಲ

 

ಚಿತ್ರ್