ಟಾಲಿವುಡ್ ನಲ್ಲಿ `ಈಗ' ಸುದೀಪ್
ಬೆಳ್ಳಿ ತೆರೆ ಮೇಲೆ ...ಅಪ್ಪ-ಮಗಳ ಸಂಭಾಷಣೆ...ಬರೀ ಮಾತು. ಮುಖ ಕಾಣೋದಿಲ್ಲ...
ಅಪ್ಪನಿಗೆ ಮಗಳು ಕತೆ ಹೇಳು ಅನ್ನೋ ಮಾತಿನ ಶಬ್ದವದು. ಅಷ್ಟೆ. ಮಗಳಿಗೆ ಕಾರ್ಟೂನ್ ನೋಡು ಅಂತಾನೆ. ಮಗಳು ದುಬ್ಬಾಲು ಬೀಳುತ್ತಾಳೆ. ಆಗ ಅಪ್ಪನ ಬಾಯಿಂದ ಹೊರ ಬರೋ ಮೊದಲ ಹೆಸರೇ ಸುದೀಪ್. ಮಹಾನ್ ಖಳನಟ....
ಹೀಗೆ ಸುದೀಪ್ ಅಭಿನಯದ `ಈಗ' ಚಿತ್ರ ಓಪನ್ ಆಗುತ್ತದೆ.. ಹಣ್ಣುಗಳನ್ನ ಮೇಲೆ ತೂರಿ, ಬಂದೂಕು ಹಿಡಿದು ಅವಗಳನ್ನ ಗುರಿಯಿಟ್ಟು ಸುಡೋ ಗುರಿಕಾರ್ ಸುದೀಪ್. ಇಲ್ಲಿಂದಲೇನೆ ದುಷ್ಟತನದ ಸನ್ನ ಸೂಚನೆ ಸಿಗುತ್ತದೆ. ಬಳಿಕ ಸುಂದರಿಯೊಬ್ಬಳು ಅಲ್ಲಿಯೆ ನಿಂತು ಗುರಿಕಾರ ಸುದೀಪ್ ರನ್ನ ಗುರಿಯಿಡೋದು ಕಲಿಸು ಅಂತಾಳೆ. ಅಷ್ಟೆ. ಬಂದೂಕು ಹಿಡಿಯೋ ನೆಪದಲ್ಲಿ ಕೈ...ಸೊಂಟ....ಟಚ್ ಮಾಡಿ ಸುದೀಪ್ ಖಳತ್ವದ ರೂಪ ನೀಡಿತ್ತಾರೆ...
ಇದು ಮುಗಿದ ಎರಡನೇ ದಿನವೋ..ಮೂರನೇ ದಿನಕ್ಕೋ. ಸುದೀಪ್ ಕಣ್ಣಿಗೆ ಬೀಳೊ ಚೆಲುವೆನೇ ಸಮಂತ್. ಮಗಧೀರದಲ್ಲಿ ಚೆಂದೆಗೆ ಬಳುಕಿದ ಸಮಂತಾ ಇಲ್ಲಿ ಇಷ್ಟವಾಗುತ್ತಾರೆ. ನಮಗಷ್ಟೇ ಅಲ್ಲ. ತೆರೆ ಮೇಲೆ ಮೆರೆಯೋ ಸುದೀಪ್ ಹೃದಯವನ್ನೂ ಕದ್ದು ಬಿಡುತ್ತಾಳೆ...ಆದ್ರೆ, ಈ ಚೆಲುವೆಯ ಹಿಂದೆ ಎದುರು ಮನೆ ನಾಣಿ ಮೊದಲೇ ಗಂಟ್ಟು ಬಿದ್ದಿರುತ್ತಾನೆ. ಒಲಿಸೋ ಓಟದಲ್ಲಿ ಎಲ್ಲವನ್ನೂ ಮಾಡುತ್ತಾನೆ...
ಒಮ್ಮೆ ನಾಯಕಿ ಸಮಂತ್ ಮನೆಯಲ್ಲಿ ಕರೆಂಟ್ ಹೋಗುತ್ತದೆ. ಕಿಡಿಕಿ ಬಳಿ ಬಂದ ನಾಯಕಿಯನ್ನ ಕತ್ತಲಲ್ಲಿ ಕಷ್ಟ ಪಡುತ್ತಿರೋದನ್ನ ಕಂಡು ನಾಯಕ ಬೇಸರಗೊಳ್ಳುತ್ತಾನೆ. ಬೆಳದಿಂಗಳ ಚಂದ್ರನನ್ನ ಕಂಡ ನಾಯಕ ತನ್ನ ಮನೆಯೊಳಕ್ಕೆ ಬಂದು ಟಾರ್ಚ್ ತೆಗೆದುಕೊಳ್ಳುತ್ತಾನೆ. ಚಿಕನ್-ಮಟನ್ ಕಟ್ಟಿಕೊಡೋ ಬೆಳ್ಳಿ ಬಣ್ಣದ ಕವರ್ ಕಾಲಿ ಮಾಡಿ ತರುತ್ತಾನೆ. ಮಾಳಿಗೆ ಮೇಲೆನೇ ಇರೋ ಡಿಷ್ ಗೆ ಬೆಳ್ಳಿ ಬಣ್ಣದ ಕವರ್ ಹಾಕುತ್ತಾನೆ. ಅದರ ಎದುರು ಕಟ್ಟಿದ ಟಾರ್ಚ್ ಆನ್ ಮಾಡುತ್ತಾನೆ. ಆ ಮೇಲೆ ಅದರಿಂದ ಹೊರಟ ಪ್ರಕರವನ್ನೆ ತನ್ನ ಪ್ರೇಯಸಿಯ
ಮನೆಯತ್ತಾ ತಿರುಗಿಸುತ್ತಾನೆ...
ಇಂತಹ ಲವ್ ಲೀ ದೃಶ್ಯಗಳು ಇಲ್ಲಿ ಸಾಕಷ್ಟಿವೆ. ಅದ್ರೆ, ನಾಯಕಿ ತನ್ನಗೂ ನಾಯಕನ ಮೇಲೆ ಪ್ರೀತಿಯಿದೆ ಎಂಬದುದನ್ನ ತಿಳಿಸೋ ಮೊದಲೆ ನಾಯಕ ಸತ್ತು ಹೋಗುತ್ತಾನೆ. ಆ ಮೇಲೆ... ಅ ಮೇಲೇನೂ. ಮುಂದೆಲ್ಲ ನಡಿಯೋದು `ನೊಣ' ದ ಆಟ..ವಿಲನ್ ಗೆ ಟಾರ್ಚರ್ ನೀಡೋದು ಇದೇ ನೊಣ...
ಹೌದು..! ಮಹಾನ್ ನಿದೇರ್ಶಕ ರಾಜಮೌಳಿ `ನೊಣ'ವನ್ನೇ ಇಟ್ಟುಕೊಂಡು ಮುಂದಿನ ಕತೆ ಹೆಣೆದಿದ್ದಾರೆ. ಸತ್ತ ನಾಯಕನೇ ಇಲ್ಲಿ ನೊಣವಾಗಿ ಬರೋದು ಕತೆಯ ಒಂದು ಸತ್ಯ. ಅದೇ ನೊಣವೇ ತನ್ನ ಕೊಂದು ಹಾಕಿದ ವಿಲನ್ ಸುದೀಪ್ ನನ್ನ ಮಟ್ಟ ಹಾಕೋದು ಕತೆ ಅಂತ್ಯ. ಆದ್ರೆ, ಇಲ್ಲಿ ಇರೋ ಮಜ ಇಷ್ಟೇ ಅಲ್ಲ. ನೊಣವನ್ನೇ ನಾಯಕನ್ನಾಗಿಸಿರೋದು. ಯಾರು ಕಲ್ಪಿಸಿಕೊಳ್ಳಲೂ ಆಗದ. ಕಲ್ಪಿಸಿದರೂ ಅದನ್ನ ತೆರೆ ಮೇಲೆ ತರಲೂ ಆಗದ ಒಂದು ಅದ್ಭುತ ಪ್ರಯತ್ನವನ್ನ ಮಾಡಲಾಗಿದೆ....
ನಿರ್ದೇಶಕ ರಾಜಮೌಳಿ ತಾವು ಕಂಡ ಕನಸನ್ನ ಸುಂದರವಾಗಿ ತೆರೆಗೆ ತಂದಿದ್ದಾರೆ. ನೊಣ ವೆಂಬ ಅನಿಷ್ಟವನ್ನ ತುಂಬಾ ಚೆನ್ನಾಗಿ ರೂಪಿಸಿದ್ದಾರೆ. ಆ ಒಂದು ನೊಣಕ್ಕೂ ಜೀವ ಇರುತ್ತದೆ. ಅದೂ ಹಿಂದಿನ ಜನ್ಮದ ಸೇಡು ತೀರಿಸಿಕೊಳ್ಳಬಹುದು ಎಂಬುದನ್ನ ಉತ್ತಮವಾಗಿ ತೋರಿದ್ದಾರೆ..
ಗ್ರಾಫಿಕ್ಸ್ ಕ್ರಿಯಾಶೀಲತೆಯಿಂದ ನೊಣ ಸೃಷ್ಠಿಯಾಗಿದೆ. ಇದರ ಪ್ರತಿ ಆಕ್ಷನ್-ರಿಯ್ಯಾಕ್ಷನ್ ಪ್ರೇಕ್ಷಕರಿಗೆ ಫೀಲ್ ಆಗುತ್ತವೆ. ತಾನು ಹಿಂದಿನ ಜನ್ಮದಲ್ಲಿ ಪ್ರೀತಿಸಿದ ಹುಡುಗಿಗೆ ತಾನು ಮತ್ತೆ ಹುಟ್ಟಿ ಬಂದೆ ಎಂಬುದನ್ನ ರಾಜ ಮೌಳಿ ಹೊಸ ಐಡಿಯಾ ಮೂಲಕವೇ ಹೇಳುತ್ತಾರೆ. ನಾಯಕಿ ಸತ್ತು ಹೋದ ನಾಯಕನನ್ನು ನೆನಪಿಸಿಕೊಂಡು ಅಳುತ್ತಾಳೆ. ಆಗ ನೊಣ ಅಲ್ಲಿಯೇ ಇರುತ್ತದೆ. ಆಕೆ ಕಂಗಳಿಂದ ಬೀಳೋ ಹನಿಯನ್ನ ಗಮನಿಸುತ್ತದೆ. ಟೇಬಲ್ ಮೇಲೆ ಬಿದ್ದ ಹನಿಯನ್ನೇ ಬಳಸಿ ನೊಣ `ನಾನು ನಾಣಿ ನಿನ್ನ ಪ್ರೇಮಿ' ಅಂತ ಬರೆಯತ್ತದೆ. ಆಗ ಎಲ್ಲವೂ ಬ್ಯೂಟಿಫುಲ್..
ಖಳನಾಯಕನ ಬೆನ್ನಟ್ಟೋ ದೃಶ್ಯಗಳೂ ಇದೇ ರೀತಿ ಹೊಸ ಬಗೆಯದ್ದಾಗಿದೆ. ನಾನು ನಿನ್ನ ಕೊಲ್ಲುವೇ ಎಂಬ ಸಂದೇಶವನ್ನ ಸ್ವತ: ಪುಟ್ಟ ನೊಣ ಕೊಡುತ್ತದೆ. ಹಾಗೆ ಹೇಳೊ ಆ ಕಲ್ಪನೆಯ ದೃಶ್ಯ ರೂಪವು ಹೊಸದಾಗಿಯೇ ಇದೆ. ಇನ್ನಿಲ್ಲದಂತೆ ಕಾರ್ ನಲ್ಲಿ ಕುಳಿತ ಖಳನಾಯಕನನ್ನ ಕಾಡುತ್ತದೆ. ಕಾರು ಚಲಾಯಿಸೋ ವಾಗ ನಕ್ಷತ್ರಿಕನಂತೆ ಕಾಟಕೊಡುವ ನೊಣದ ಏಟಿಗೆ ಸುದೀಪ್ ಕಂಗಾಲು. ಕಿವಿ-ಮೂಗಿನ ಮೇಲೆ ಕುಳಿತು ಗುಯ್ ಗುಟ್ಟೋ ನೊಣವನ್ನ ಹೊಡೆಯಲು ಹೋಗುತ್ತಾನೆ. ಆಗ ಕಾರೆ ಪಲ್ಟಿ. ದೊಡ್ಡ ಅಪಘಾತದಿಂದ ಕಾರಿನಡಿ ಸಿಲುಕಿರೋ ಖಳನಾಯಕನಿಗೆ ನೊಣ ' ಐ ವಿಲ್ ಕಿಲ್ ಯು' ಅಂತ ದಮ್ ಕೊಡುತ್ತದೆ. ಮುಂದೆ ನೊಣ ಏನು ಮಾಡುತ್ತದೆ. ಖಳನಾಯಕ ಏನ್ ಆಗುತ್ತಾನೆ. ಇದನ್ನ ತೆರೆ ಮೇಲೆ ನೋಡಿ.
ಇದಕ್ಕೂ ಹೆಚ್ಚಾಗಿ ನಮ್ಮ ಕನ್ನಡದ ಕಿಚ್ಚ ಖಳ ನಟರಾಗಿ ಹಚ್ಚು ಮಿಂಚಿದ್ದಾರೆ. ನಟನೆ ಸಂದರ್ಭದಲ್ಲಿ ಕಾಣದೇ ಇರೋ ನೊಣವನ್ನ ಕಲ್ಪಿಸಿಕೊಂಡು ಅಭಿನಯಿಸಿರೋದು ನಿಜಕ್ಕೂ ಅದ್ಭುತ. ತೆಲುಗು ಮಂದಿ ಅಷ್ಟೇ ಅಲ್ಲದೆ. ಕನ್ನಡಿಗರೂ ಕಿಚ್ಚ ಸುದೀಪ್ ನಟನೆಯನ್ನ ಮೆಚ್ಚಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತವೂ ಖುಷಿಕೊಡುತ್ತದೆ. ಗ್ರಾಫಿಕ್ಸ್ ಕಸರತ್ತು ಮನಸ್ಸಿನಲ್ಲಿ ಮನೆ ಮಾಡುತ್ತದೆ. ನಾಯಕಿ ಸಮಂತಾ ಮುಗ್ಧ.ಸ್ನಿಗ್ದ ಸೌಂದರ್ಯದಿಂದ ಕಾಡುತ್ತಾರೆ. ಯುವ ನಾಯಕ ನಾಣಿ ಸತ್ತು ಪ್ರೇಕ್ಷಕರ ಎದೆಯಲ್ಲಿ ಶಾಶ್ವತವಾಗಿ ಉಳಿತ್ತಾರೆ. ಪ್ರತಿ ಜನ್ಮಕೂ ಐ ಯ್ಯಾಮ್ ಬ್ಯಾಕ್ ಅಂತಲೂ ಥ್ರಿಲ್ ಮೂಡಿಸುತ್ತಾರೆ. ಒಮ್ಮೆ ಹೋಗಿ `ಈಗ' ನೋಡಿ. ಈಗ ಅಂದ್ರೆ ಕನ್ನಡದಲ್ಲಿ `ನೊಣ' ಅನ್ನೋದು ಗೊತ್ತಿರಬೇಕಲ್ವಾ. ಇರಲಿ. ಗೋ ಅಂಡ್ ವಾಚ್ `ಈಗ' ಲವ್ ಸ್ಟೋರಿ....
ರೇವನ್ ಪಿ.ಜೇವೂರ್
Comments
ಉ: ಟಾಲಿವುಡ್ ನಲ್ಲಿ `ಈಗ' ಸುದೀಪ್