ಟಿವಿ ಧಾರವಾಹಿಯಿಂದ ಬೇಸತ್ತ ಕಲಾವಿದ

ಟಿವಿ ಧಾರವಾಹಿಯಿಂದ ಬೇಸತ್ತ ಕಲಾವಿದ

ಬರಹ

ನಾನು

ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಬಾಲ್ಯದಿಂದಲೂ ನೃತ್ಯ, ನಾಟಕ ಎಂದರೆ ಆಸಕ್ತಿ. ಹಾಗೇ ವಿವಿಧ ಕಾಯFಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸುತ್ತಿದ್ದೆ. ಆದರೆ ಮನೆಯಲ್ಲಿ ಯಾರೂ ಕಲಾವಿದರು ಅಥವಾ ಕಲೆಯ ಬಗ್ಗೆ ಆಸಕ್ತಿ ಇಲ್ಲದವರು ಕಾರಣ ನನ್ನ ಕಲೆ ಒಂದು ಹಂತಕ್ಕೆ ಮಾತ್ರ ಸೀಮಿತವಾಗಿತ್ತು. 1990-91ರಲ್ಲಿ ಸಾಗರದ ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೊಮೊ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಗೆ ಸೇಪFಡೆಯಾದೆ. ಅಲ್ಲಿ ನಡೆಯುವ ಪ್ರತಿ ಕಾಯFಕ್ರಮದಲ್ಲೂ ಪೂಣF ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಪ್ರಸಿದ್ದಿಯಾದೆ. ವಷFಕ್ಕೊಮ್ಮೆ ನಡೆಯುವ ಸೃಜನ ಎನ್ನುವ ಕಾಯFಕ್ರಮದಲ್ಲಿ 30 ಕಾಯFಕ್ರಮ ಇದ್ದರೆ ಅದರಲ್ಲಿ ನನ್ನದು ಸುಮಾರು 12 ರಿಂದ 13 ಇರುತ್ತಿತ್ತು. ಬ್ರೇಕ್ ಡಾನ್ಸ್, ಸ್ಕಿಟ್, ಚಿತ್ರ ನಟರ ಮಿಮಿಕ್ರಿ ಕೆಲವೊಮ್ಮೆ ಅಲ್ಲಿನ ಉಪನ್ಯಾಸಕರ ಮಿಮಿಕ್ರಿ ಕೂಡ ಬಂದು ಹೋಗಿರುತ್ತಿತ್ತು. ನಾನು ವೇದಿಕೆಗೆ ಬಂದರೆ ವಿದ್ಯಾಥಿFಗಳ ಕರತಾಡನ ಮುಗಿಲು ಮುಟ್ಟಿರುತ್ತಿತ್ತು. ಇದು ನನ್ನಲ್ಲಿನ ಕಲೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತಿತ್ತು.

ಆಗ ನನ್ನ ತಲೆಗೆ ಬಂದಿದ್ದು, ನಾನು ಯಾಕೆ ಧಾರವಾಹಿಗಳಲ್ಲಿ ಅಥವಾ ಸಿನಿಮಾಗಳಲ್ಲಿ ನಟಿಸಬಾರದು. ಎಂತೆಂತವರೋ ನಟಿಸುತ್ತಾರೆ. ಅವರಿಗೆ ಹೋಲಿಸಿದರೆ ನಾನು ಸುಂದರವಾಗಿಯೇ ಇದ್ದೇನೆ (ಹಾಗಂತ ನಾನಂದುಕೊಂಡಿದ್ದು) ಎಂದುಕೊಂಡು ಟಿವಿಯಲ್ಲಿ ಬರುವಂತಹ ಪಾತ್ರಗಳನ್ನು ನಾನು ಎಂದೇ ನೋಡುತ್ತಿದ್ದೆ. ಡಿಪ್ಲೊಮೊ ಮುಗಿದ ನಂತರ ಊರಿಗೆ ವಾಪಾಸ್ಸಾದೆ. ಅಲ್ಲಿಗೆ ನನ್ನಲ್ಲಿದ್ದ ಕನಸು ಮುದುಡಿಕೊಂಡಿತ್ತು. ನಂತರ ಬೆಂಗಳೂರಿನಲ್ಲಿ ಬಿಪಿಎಲ್ ಕಂಪೆನಿಗೆ ಸೇಪFಡೆಯಾದೆ. ಹೀಗೆ ಒಂದು ದಿನ ಹೊಸೂರು ರಸ್ತೆಯಲ್ಲಿ ಹೋಗುತ್ತಿರುವಾಗ ಷೂಟಿಂಗೊಂದು ನಡೆಯುತ್ತಿತ್ತು. ಅದರ ನಿದೇFಶಕ ನಾಗೇಶ್ (ಹೆಸರು ಮರೆತಿದೆ), ಅವರನ್ನು ಅಲ್ಲಿ ಭೇಟಿ ಮಾಡಿ ನನ್ನ ಪ್ರವರ ಹೇಳಿದೆ. ಪ್ರತಿಕ್ರಿಯಿಸಿದ ಅವರು ಉತ್ತಮ ಪೋಟೋಗಳನ್ನು ತನ್ನಿ ಎಂದಿದ್ದೇ ತಡ. ಜಯನಗರದ ಪೋಟೋ ಸ್ಟುಡಿಯೋ ಒಂದಕ್ಕೆ ತೆರಳಿ ಪೋಟೋ ತೆಗೆಸಿ ಅವರ ಹನುಮಂತನಗರದ ಕಚೇರಿಗೆ ಹೋದೆ. ಆಗ ಈಗಿನ ಧಾರವಾಹಿಯ ಪ್ರಸಿದ್ದ ನಟಿ ಸೌಮ್ಯಲತಾ ಕೂಡ ಇದ್ದರು. ಸುರೇಶ್ ನಿಮ್ಮ ಪಾತ್ರ ಬರುವುದು ಇನ್ನೂ ತಡವಾಗುತ್ತೆ. ಕೆಲ ದಿನ ನಾಟಕ ಮಾಡಿ ಎಂದು ಕಲಾಕ್ಷೇತ್ರದ ಎಂ.ಎಸ್.ಉಮೇಶ್ (ಚಿತ್ರನಟ)ರವರ ಅಣ್ಣ ಎಂ.ಎಸ್.ರಮೇಶ್ ರವರನ್ನು ಪರಿಚಯಿಸಿದರು. ಸಾಯಿಬಾಬಾ ಎನ್ನುವ ನಾಟಕ ಕೂಡ ಮಾಡಿದ್ದಾಯಿತು. ಅಂದಿನಿಂದ ಕಲಾಕ್ಷೇತ್ರದ ಕಟ್ಟೆ ನನ್ನ ಸಂಜೆಯ ಅಡ್ಡೆಯಾಯಿತು. ವಿವಿಧ ನಾಟಕಗಳನ್ನು ನೋಡುವುದು ಹಾಗೇ ಮಾಡುವುದು ಹವ್ಯಾಸವಾಗಿ ಹೋಯಿತು. ಆಗ ಪರಿಚಯವಾದವರು ಇವತ್ತಿನ ಧಾರವಾಹಿಗಳಲ್ಲಿ ನಟಿಸುತ್ತಿರುವ ಬಂಡಿ ವೆಂಕಟೇಶ, ಮಲ್ಲಿಕಾಜುFನ, ಶ್ರೀನಿವಾಸ ಕೆಂಪ್ತೂರ್, ತೇಜಸ್ವಿನಿ, ಆನಂದ್.ಡಿ.ಕಳಸ, ದುನಿಯಾ ವಿಜಿ ಸೇರಿದಂತೆ ಹಲವರ ಪರಿಚಯವಾಯ್ತು. ಶಿವುಕುಮಾರ್ ಎಂಬ ನಿದೇFಶಕರು ಡಿಡಿ9ಗೆ "ಬಾದಷಹನ ದಂಡನೆ" ಎಂಬ ನಾಟಕವನ್ನು ಮಾಡುತ್ತಿದ್ದೇವೆ. ಅದಕ್ಕೆ ಕನ್ನಡ ಶುದ್ದವಾಗಿ ಮಾತನಾಡುವವರು ಬೇಕು ಎಂದರು. ಆಗ ತಕ್ಷಣ ನನ್ನನ್ನು ತೋರಿಸಿದ್ದೇ ಹಿರಿಯರಾದ ಆನಂದ್.ಡಿ.ಕಳಸ. ಸುಮಾರು 20 ಪೇಜ್ ಡೈಲಾಗ್ ಇತ್ತು. ಯಶಸ್ವಿಯಾಗಿ ನಾಟಕ ಪ್ರದಶFನ ಕೂಡ ಆಯಿತು. ಇದಾಗಿ ಸುಮಾರು 4ದಿನ ಕಳೆದಿರಬಹುದು ಕವಲುದಾರಿ ಧಾರಾವಾಹಿಯಲ್ಲಿ ಒಂದು ಪಾತ್ರವಿದೆಯಂತೆ ಮಾಡುತ್ತೀರಾ ಸುರೇಶ್ ಎಂದರು. ಅದನ್ನೇ ಕಾಯುತ್ತಿದ್ದ ನಾನು ಆಯಿತು ಅಂದೆ.

ಮಾರನೆಯ ದಿನ ಬೆಳಗ್ಗೆ 6ಕ್ಕೆ ಅರಕೆರೆಯ ಟೆಕ್ನೋಮಾಕ್F ಸ್ಟುಡಿಯೋಕ್ಕೆ ಹೋದೆ. ಅಂದು ಸಹಾಯಕ ನಿದೇFಶಕ ಶ್ರೀನಗರ ಚಂದ್ರು ಉಸ್ತುವಾರಿ ವಹಿಸಿಕೊಂಡಿದ್ದರು. ನಾಗೇಶ ಮಯ್ಯಾನ ಅಸಿಸ್ಟೆಂಟ್ ಕ್ಯಾರೆಕ್ಟರ್ ಇತ್ತು ಮಧ್ಯಾಹ್ನದವರೆಗೆ ಷೂಟಿಂಗ್ ಮುಗಿಸಿ ಮನೆಗೆ ಕಳಿಸಿದರು. ಅಂದು ಸಾಕಷ್ಟು ಖುಷಿಯಾಗಿದ್ದೆ. ನಂತರ ನಡೆದದ್ದೆಲ್ಲಾ ಕಹಿ ಘಟನೆಗಳೇ. ಮಾರನೆಯ ದಿನ ಅದೇ ಧಾರವಾಹಿ ಷೂಟಿಂಗ್. ಅಂದು ಮುಖ್ಯ ನಿದೇFಶಕ ಸುಶೀಲ್ ಮೊಕಾಶಿ ಬಂದಿದ್ದರು. ನನ್ನನ್ನು ನೋಡಿ ಏನೋ ಹೀರೋ ಪಾತ್ರ ಮಾಡ್ತೀಯಾ. ಬಾ ನಿನಗೆ ಇದೆ ಎಂದರು. ಡೈಲಾಗ್ ಷೀಟ್ ನಲ್ಲಿ ಇಲ್ಲದೇ ಹೋದ ಡೈಲಾಗ್ ಗಳನ್ನು ನನ್ನಿಂದ ಹೇಳಿಸಿದರು. ನನ್ನಲ್ಲಿದ್ದ ಆತ್ಮ ವಿಶ್ವಾಸ ಬಹಳ ಘಟ್ಟಿಯಾಗಿತ್ತು. ಡಾನ್ಸ್ ಮಾಡು ಎಂದರು. ನಾನು ನೇರವಾಗಿಯೇ ಮಾಡಲ್ಲ ಅಂದೆ. ಅಲ್ಲಿದ್ದ ಜ್ಯೂನಿಯರ್ ಆಟಿFಸ್ಟ್ ಗಳಿಂದ ಡಾನ್ಸ್ ಮಾಡಿ ಮಜಾತೆಗೆದುಕೊಂಡ ಮೊಕಾಶಿ. ಆತನ ವಿಕೃತ ಮನಸ್ಸು ನೋಡಿ ನನಗೆ ಇಂತವರು ಇರುತ್ತಾರಾ ಎನ್ನಿಸಿತು. ಈತ ಶ್ರೀನಿವಾಸ ಕೆಂಪ್ತೂರು ಎನ್ನುವವರಿಗೆ ತಾನು ಸೆಟ್ ನಲ್ಲಿದ್ದ ಯುವತಿಯರ ಮುಂದೆ ಹೀರೋ ಆಗಲು ಮೊಕಾಶಿ ಇವರನ್ನು ಸಾಕಷ್ಟು ಅವಮಾನಿಸಿದ್ದರು. ಇದನ್ನು ಶ್ರೀನಿವಾಸ್ ಆಗಾಗ ನೆನಪಿಸಿಕೊಂಡು ಬೇಜಾರು ಮಾಡಿಕೊಳ್ಳುತ್ತಿದ್ದರು. ಅದಾದ ಕೆಲ ದಿನಗಳ ನಂತರ ಮತ್ತೆ ಕರೆ ಬಂತು. ಶ್ರೀನಗರ ಚಂದ್ರು ಅಂದಿನ ನಿದೇFಶಕ. ನನಗೆ ಮಯ್ಯಾ ತಮಾಷೆಗೆ ಹೊಡೆಯುವ ಸೀನ್ ಇತ್ತು. ಚಂದ್ರು ಮಯ್ಯಾನಿಗೆ ಕಣ್ಣು ಸನ್ನೆ ಮಾಡಿ ಜೋರಾಗಿ ಹೊಡೆಯಲು ಹೇಳಿದರು. ಮಯ್ಯಾ ಅವರು ಹೇಳಿದಂತೆ ನಡೆದುಕೊಂಡ. ಅದೇ ನಾನು ತಿರುಗಿಸಿ ಮಯ್ಯಾನಿಗೆ ಹೊಡೆದು ಅವನ ಮಾನ ಕಳೆಯ ಬಹುದಾಗಿತ್ತು. ಆದರೆ ಹಿರಿಯ ನಟ ಎನ್ನುವ ಗೌರವ ಇದ್ದುದರಿಂದ ಸುಮ್ಮನಾದೆ. ಮಯ್ಯಾ ಧಾರವಾಹಿಗೆ ಬಂದಾಗ ಆತನ ಸಹನಟರು ಹೀಗೆ ಮಾಡಿದ್ದರೆ ಆತ ಇವತ್ತು ಇಂಡಸ್ಟ್ರಿಯಲ್ಲಿ ಇರುತ್ತಲೇ ಇರಲಿಲ್ಲ. ಇವರೆಲ್ಲಾ ಇಷ್ಟಕ್ಕೇ ಸೀಮಿತ ಎಂದು ಷೂಟಿಂಗ್ ಮುಗಿಸಿ ಮನೆಗೆ ಹಿಂತಿರುಗಿದೆ. ಅಂದಿನಿಂದ ಕವಲುದಾರಿ ಪಾತ್ರ ಇದೆ ಬನ್ನಿ ಎಂದರೂ ನಾನು ನೇರವಾಗಿ ಬರಲ್ಲ ಎಂದು ಹೇಳುತ್ತಿದ್ದೆ. ಮಣಿಪಾಲ್ ಎಂಟರ್ ಟೈನರ್ಸ್ ನ ಕಿಲಾಡಿ ತಾತಾ ಎಂಬ ಧಾರವಾಹಿಗೆ ಕರೆ ಬಂತು. ಅಲ್ಲಿನ ನಿದೇFಶಕ ಸುನೀಲ್ ಪುರಾಣಿಕ್ ಎಂಬ ಮಹಾನ್ ನಿದೇFಶಕ. ಹಿರಿಯ ನಟ ಶಿವರಾಂ ಒಬ್ಬರನ್ನು ಬಿಟ್ಟು ಮಿಕ್ಕವರೆಲ್ಲರಿಗೂ ಈತ ಬಳಸಿದ್ದು ಶುದ್ದ ಸಂಸ್ಕೃತ ಪದಗಳನ್ನೇ. ಅಂದು ಈತ ನನಗೆ ಏನೋ ಅಂದ ಎಂದು ಜಗಳವಾಡಿ ವಾಪಾಸ್ಸಾಗಿದ್ದೆ. ಅಲ್ಲಿಂದ ಧಾರವಾಹಿ ಎಂದರೆ ಮೂಗು ಮುರೆಯಲು ಆರಂಭಿಸಿದೆ. ವಠಾರ ಧಾರವಾಹಿಯಲ್ಲಿ ಎಲ್ಲರೂ ಪ್ರೋತ್ಸಾಹಿಸುತ್ತಾರೆ ಹೋಗಿ ಎಂದು ಕಲಾಕ್ಷೇತ್ರದ ಆನಂದ್ ಕಳಿಸಿದರು. ಅಂದು ಅಮರದೇವ ನಿದೇFಶಕರು. ಸುಮಾರು ಒಂದು ಕಿ.ಮೀ ನಷ್ಟು ಓಡುವ ಸೀನ್ ಇತ್ತು. ನಾವೆಲ್ಲಾ ಓಡಿದೆವು. ನಂತರ ತಕ್ಷಣವೇ ಡೈಲಾಗ್ ಹೇಳಿ ಎಂದರು. ಒಂದೆಡೆ ಏದುಸಿರು ಮತ್ತೊಂದೆಡೆ ಹೊಸ ಜನ ಡೈಲಾಗ್ ಗಡಿಬಿಡಯಾಯಿತು. ಅಮರದೇವ ಕೂಗಾಡಲು ಆರಂಭಿಸಿದರು. ಯಾವನೋ ಇವನನ್ನು ಕರೆದುಕೊಂಡು ಬಂದಿದ್ದು ಎಂದು. ಆದರೂ ಚೆನ್ನಾಗಿಯೇ ಡೈಲಾಗ್ ಹೇಳಿ ನನ್ನ ಪಾತ್ರ ಮುಗಿಸಿದೆ. ಅದೇ ಹಿರಿಯ ನಟರಿಗೆ ಹೀಗೆ ಮಾಡಿದ್ದರೆ ಅಮರದೇವನಿಗೆ ಸುಮ್ಮನೆ ಬಿಡುತ್ತಿದ್ದರಾ?, ಇದರ ಬಗ್ಗೆ ನಾಗತ್ತಿಹಳ್ಳಿ ಗಮನಹರಿಸುವುದಿಲ್ಲವಾ ಎಂದು ಅಲ್ಲಿನ ಒಬ್ಬರನ್ನು ಕೇಳಿದೆ. ಅದಕ್ಕೆ ಆತ ಪ್ರತಿಕ್ರಿಯಿಸಿದ್ದು ಅವರು ಸೆಟ್ಗೆ ಬರುವುದು ಕಡಿಮೆ ಎಂದು. ಈವರೆಗೆ ಅದರ ಮತ್ತು ಪುಣ್ಯ ಧಾರವಾಹಿಯ ಪೇಮೆಂಟ್ ಕೂಡ ಬಂದಿಲ್ಲ. ಈ ಧಾರವಾಹಿಯ ಸಹವಾಸವೇ ಬೇಡ ಎಂದು ಕೆಲ ದಿನಗಳು ಸುಮ್ಮನಾದೆ. ದುನಿಯಾ ವಿಜಿ ಮತ್ತು ಮಲ್ಲಿ ದರಿದ್ರ ಲಕ್ಷ್ಮಿಯರು ಧಾರವಾಹಿಯಲ್ಲಿ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದರು. ಸಂಜಯ್ ನಗರಕ್ಕೆ ಹೋದೆ. ವಿಜಿ ಸರಿಯಾಗಿ ಡೈಲಾಗ್ ಹೇಳುತ್ತಿರಲಿಲ್ಲ, ಲೇ ಯಾವನೋ ಇವನನ್ನು ಕರೆ ತಂದಿದ್ದು ಎಂದು ಫಣಿಯ ಅರೆಚಾಟ ನೋಡಿದ ನನಗೆ ಥೂತ್ತರಿಕೆ ಧಾರವಾಹಿಯ ಸಹವಾಸವೇ ಬೇಡ ಎಂದೆನ್ನಿಸಿತ್ತು. ವಿಜಿ ಒಂದು ಧಮ್ ಹೊಡೆದುಕೊಂಡು ಬಂದು ಹೇಗೋ ಷೂಟಿಂಗ್ ಮುಗಿಸಿದ್ದ. ಹಿರಿಯ ನಟ ಶ್ರೀನಿವಾಸ ಮೂತಿF ಧಾರವಾಹಿ ಮಾಡ್ತಾರಂತೆ ನೀನೂ ಬಾ ಎಂದು ದುನಿಯಾ ವಿಜಿ ಮತ್ತು ಮಲ್ಲಿ ಬಲವಂತ ಮಾಡಿದರು. ಯಾರೋ ಒಬ್ಬರು ಹೇಳಿದ್ದರು ಶ್ರೀನಿವಾಸ ಮೂತಿF ಸೆಟ್ ನಲ್ಲಿ ಮನುಷ್ಯತ್ವಕ್ಕೂ ಮೀರಿ ವತಿFಸುತ್ತಾರೆ ಅಂತ, ಅದನ್ನ ನೆನಪಿಸಿಕೊಂಡ ನನಗೆ ನೀವು ಮಾಡಿ ಜೊತೆಗೆ ಬರುತ್ತೇನೆ ಎಂದು ಅವರ ಮನಗೆ ಹೋದೆ. ವಿಜಿ ಹಾಗೂ ಮಲ್ಲಿಗೆ ಡಯಲಾಗ್ ಷೀಟ್ ನೀಡಿ ಸ್ಕ್ರೀನ್ ಟೆಷ್ಟ್ ಮಾಡಿದರು. ವಿಜಿಗೆ ಕನ್ನಡ ಶುದ್ದವಿಲ್ಲ. ಮಲ್ಲಿಗೆ ನಂತರ ಪಾತ್ರ ಕೊಡುವುದಾಗಿ ಹೇಳಿದರು. ಇವೆಲ್ಲಾ ನಮಗೆ ಸಿಗಲ್ಲಾ ಬನ್ರೋ ಎಂದು ವಾಪಾಸ್ಸು ಕರೆದುಕೊಂಡು ಬಂದಿದ್ದೆ.

ಆದರೆ

ನನಗೆ ಇಷ್ಟವಾದ ನಿದೇFಶಕ ನಿಖಿಲ್ ಗೌಡ, ಸವಿಗಾನ ಧಾರವಾಹಿ ಷೂಟಿಂಗ್ ನಡೆಯುತ್ತಿತ್ತು. ಬಂಡಿ ಪಾತ್ರ ಮಾಡುತ್ತಿದ್ದ. ನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಪಾತ್ರ ಮಾಡ್ತೀರಾ ಎಂದ್ರು. ಅದಕ್ಕೆ ಇನ್ನೂ ಅದೂ ಇದೂ ಹೇಳುತ್ತಿರುವಾಗಲೇ ಕೈಗೊಂದು ಹಾಳೆ ಕೊಟ್ಟು ಹೇಳಿ ನೋಡೋಣ ಎಂದರು. ಹೇಳುತ್ತಿದ್ದಂತೆ ಡಾಕ್ಟರ್ ಡ್ರೆಸ್ ಹಾಕಿರಿ ಎಂದರು. ಅಂದು ಸಂಜೆಯವರೆಗೆ ಷೂಟಿಂಗ್ ಮಾಡಿದರು. ಆತ ನಮ್ಮನ್ನು ಸ್ನೇಹಿತರಂತೆ ಕಾಣುವುದು ಮಾತ್ರವಲ್ಲದೆ ಪ್ರತಿ ಬಾರಿಯ ಸೀನ್ ಮುಗಿದಾಗ ಚಪ್ಪಾಳೆ ತಟ್ಟುವುದರ ಮುಲಕ ಪ್ರೋತ್ಸಾಹಿಸುತ್ತಿದ್ದರು. ಇದು ಒಬ್ಬ ನಿದೇFಶಕನಿಗೆ ಇರಬೇಕಾದ ನೈಜ ಗುಣ ಆತನಲ್ಲಿತ್ತು. ಈ ಅನುಭವಗಳನ್ನು ನಿಮ್ಮ ಬಳಿ ಯಾಕೆ ಹಂಚಿಕೊಳ್ಳುತ್ತಿದ್ದೇನೆ ಎಂದರೆ. ಹಲವಾರು ಗ್ರಾಮಗಳಿಂದ ನಟನಾಗಬೇಕು ಎಂಬ ಕನಸಿನೊಂದಿಗೆ ಯುವಕರು ಬೆಂಗಳೂರಿಗೆ ಬಂದಿರುತ್ತಾರೆ. ಅಂತವರಿಗೆ ಈ ತರಹದ ಅಥವಾ ಹೆಚ್ಚಿನ ಅವಮಾನ ಮಾಡಿದರೆ ಅವರ ಪರಿಸ್ಥಿತಿ ಏನಾಗಬೇಡ. ಬುದ್ದಿ ಭ್ರಮಣೆಯಾಗಬಹುದು ಅಥವಾ ಆತ್ಮಹತ್ಯೆಯೇ ಮಾಡಿಕೊಳ್ಳಬಹುದು. ಸೆಟ್ ಗಳಲ್ಲಿ ಈ ರೀತಿಯ ವಿಕೃತ ಮನೋಭಾವದ ನಿದೇFಶಕರುಗಳಿಗೆ ಹಿರಿಯರು ಬುದ್ದಿ ಹೇಳುವಂತಾಗಬೇಕು. ಇಲ್ಲದೇ ಹೋದರೆ ಸುರೇಶ್ ನಂತಹ ಅನೇಕರು ಅವಮಾನ ಅನುಭವಿಸುವುದು ಹಾಗೇ ಕಲೆಯ ಬಗ್ಗೆ ನಿಕೃಷ್ಠ ಭಾವನೆ ಹೊಂದುವುದು ನಿಶ್ಚಿತ. ನಿಜವಾಗಿ ನೋಡಿದರೆ ನಾನು ಮೇಲೆ ಪ್ರಸ್ತಾಪ ಮಾಡಿದವರಲ್ಲಿ ಒಬ್ಬರನ್ನು ಹೊರತು ಪಡಿಸಿ ಮಿಕ್ಕವರು ಅಂತ ಹೆಸರೇನೂ ಮಾಡಿಲ್ಲ. ಆದರೆ ಅವರ ವಿಕೃತ ಭಾವನೆಗಳು ಬೇರೆಯವರಿಗೆ ಕೆಡುಕಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತದೆ. ಅಂದು ದುನಿಯಾ ವಿಜಿಗೆ ಬೈದವರು ಆಡಿಕೊಂಡವರು ಇಂದು ಆಡಿಕೊಳ್ಳಲಿ ನೋಡೋಣ. ಸಾಧ್ಯವಿಲ್ಲ. ಪವF ಎಂಬ ಧಾರವಾಹಿಯಲ್ಲಿ ನಟಿ ತಾರಾರವರ ಮಗನಾಗಿ ನಟಿಸಿದವನು ಈ ಟಿವಿಯಲ್ಲಿ ಕಾಯF ನಿವFಹಿಸುತ್ತಿದ್ದಂತವರ ಸಂಬಂಧಿಕ. ಆತ ಮಾಡಿದ್ದೇ ಆಕ್ಟಿಂಗ್ ಎನ್ನುವಂತಿತ್ತು. ಆತನಿಗೆ ಒಬ್ಬರೂ ಬಯ್ಯುತ್ತಿರಲಿಲ್ಲ. ಕಾರಣ ಬೈದರೆ ಧಾರವಾಹಿಯೇ ಢಮಾರ್. ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಲೆ ಇದ್ದೇ ಇರುತ್ತದೆ. ಅದನ್ನು ತೆಗೆಯುವ ಕೆಲಸವೇ ನಿದೇFಶಕನದ್ದು. ಅದನ್ನು ಆತನಿಗೆ ಮಾಡಲು ಬರುವುದಿಲ್ಲ ಎಂದರೆ ಆತ ಅನ್ ಫಿಟ್ ಅಂತ. ನಾನು ಬರೆದ ಈ ಲೇಖನದಿಂದ ಕೆಲವರಾದರೂ ಸ್ವಲ್ಪ ಮಟ್ಟಿನ ಬದಲಾವಣೆ ಕಂಡರೆ ಅಷ್ಟೇ ಸಾಥFಕ.